BengaluruCinemaDistrictsUncategorized

ಅಭಿಷೇಕ್‌ ವಿವಾಹ ಬೀಗರೂಟಕ್ಕೆ 7 ಟನ್‌ ಮಟನ್‌, 7 ಟನ್‌ ಚಿಕನ್‌

ಮಂಡ್ಯ; ಅಂಬರೀಶ ಪುತ್ರ ಅಭಿಷೇಕ್‌ ಹಾಗೂ ಅವಿವಾ ವಿವಾಹ ಇದೇ ಜೂನ್‌ 5ರಂದು ನಡೆದಿತ್ತು. ಇದೀಗ ಜೂನ್‌ 16ರಂದು ಮಂಡ್ಯದಲ್ಲಿ ಬೀಗರ ಊಟ ಏರ್ಪಡಿಸಲಾಗಿದೆ. ಸುಮಾರು 50 ಸಾವಿರ ಜನಕ್ಕೆ ಮಾಂಸದೂಟ ವ್ಯವಸ್ಥೆ ಮಾಡಲಾಗಿದೆ. ಮೋದಿಯವರ ಕಾರ್ಯಕ್ರಮ ನಡೆದಿದ್ದ ಮದ್ದೂರಿನ ಗೆಜ್ಜಲಗೆರೆಯ ಬೃಹತ್ ಮೈದಾನದಲ್ಲಿ ಬೀಗರೂಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. 15 ಎಕರೆ ಪ್ರದೇಶದಲ್ಲಿ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್​ಗಳನ್ನು ಮಾಡಲಾಗುತ್ತಿದೆ.

ಬೀಗರ ಊಟಕ್ಕೆ 7 ಟನ್ ಮಟನ್ ಹಾಗೂ 7 ಟನ್ ಚಿಕನ್‌ ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಮೆನುವಿನಲ್ಲಿ ಏನೇನಿದೆ..?
ರಾಗಿ ಮುದ್ದೆ,
ಬೋಟಿ ಗೊಜ್ಜು,
ಮೊಟ್ಟೆ,
ಮಟನ್,
2 ತರ ಚಿಕನ್,
ಗೀ ರೈಸ್,
ಅನ್ನ,
ತಿಳಿ ಸಾಂಬಾರ್,
ಮಜ್ಜಿಗೆ,
ಬಾಳೆಹಣ್ಣು,
ಬೀಡಾ ನಂದಿನಿ ಐಸ್ ಕ್ರೀಂ,
ವಾಟರ್ ಬಾಟಲ್​

Share Post