ಪರಿಹಾರಕ್ಕಾಗಿ ರೈಲು ದುರಂತದಲ್ಲಿ ಸಾವನ್ನಪ್ಪಿದವವನನ್ನೇ ಪತಿ ಎಂದ ಮಹಿಳೆ
ಭುವನೇಶ್ವರ; ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ತನ್ನ ಪತಿ ಸಾವನ್ನಪ್ಪಿದ್ದಾನೆಂದು, ಶವವೊಂದನ್ನು ಗುರುತಿಸಿದ್ದ ಮಹಿಳೆಯೊಬ್ಬರು ಪರಿಹಾರಕ್ಕೆ ಸುಳ್ಳು ಹೇಳಿದ್ದಳು ಅನ್ನೋದು ಈಗ ಪತ್ತೆಯಾಗಿದೆ. ಆಕೆಯ ಗಂಡನೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬಾಲಸೋರ್‌ನಲ್ಲಿ ನಡೆದ ರೈಲು ದುರಂತದಲ್ಲಿ ಸುಮಾರು 300 ಮಂದಿ ಸಾವನ್ನಪ್ಪಿದ್ದರು. ಮೃತರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿದ್ದವು. ಮೃತದೇಹಗಳನ್ನು ಗುರುತಿಸುವ ಕೆಲಸ ಈಗಲೂ ನಡೆಸುತ್ತಿದೆ. ಈ ನಡುವೆ ಮಹಿಳೆಯೊಬ್ಬರು, ಮೃತದೇಹವೊಂದನ್ನು ಗುರುತಿಸಿ, ಆತ ತನ್ನ ಪತಿ ಎಂದು ಹೇಳಿಕೊಂಡಿದ್ದಳು. ಪರಿಹಾರಕ್ಕಾಗಿ ಮನವಿ ಮಾಡಿದ್ದಳು. ಆದ್ರೆ ಸೂಕ್ತ ದಾಖಲೆ ಒದಗಿಸಿರಲಿಲ್ಲ. ಇದೀಗ ಆಕೆ ಪತಿಯೇ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
ಈ ಬಗ್ಗೆ ಬಹನಾಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಾರ್ವಜನಿಕರ ಹಣವನ್ನು ದೋಚಲು ಯತ್ನಿಸಿದ ಗೀತಾಂಜಲಿ ಈಗ ತಲೆಮರೆಸಿಕೊಂಡಿದ್ದಾಳೆ. ಗೀತಾಂಜಲಿ ದತ್ತಾ ಎಂಬ ಈಕೆ ರೈಲು ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತಾ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಳು. ಅಲ್ಲದೆ ಮೃತದೇಹವೊಂದನ್ನು ತನ್ನ ಗಂಡನದ್ದೇ ಎಂದು ಗುರುತಿಸಿದ್ದಳು.