ಗ್ಯಾರೆಂಟಿಗಳು ಜಾರಿ; ಆದ್ರೆ ಷರತ್ತುಗಳು ಅನ್ವಯಿಸುತ್ತವೆ!; ಸಿಎಂ ಹೇಳಿದ್ದೇನು..?
ಬೆಂಗಳೂರು; ನಾವು ಐದು ಗ್ಯಾರೆಂಟಿಗಳನ್ನು ಜಾರಿ ಮಾಡೋದಾಗಿ ಹೇಳಿದ್ವಿ. ಅವುಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ. ಷರತ್ತುಗಳೊಂದಿಗೆ ಈ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯೋಜನೆಗಳು ಹಾಗೂ ಅದರ ಮೇಲಿನ ಷರತ್ತುಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಗ್ಯಾರೆಂಟಿ ನಂಬರ್ ವನ್ – ಗೃಹಜ್ಯೋತಿ – 200 ಯೂನಿಟ್‌ವರೆಗೆ ಉಚಿತ ವಿದ್ಯುತ್
– ಇದಕ್ಕೆ ಹಿಂದಿನ ಒಂದು ವರ್ಷದಲ್ಲಿ ಒಟ್ಟು ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದಾರೆ ಎಂದು ಲೆಕ್ಕ ಹಾಕಲಾಗುತ್ತದೆ. ಅದರಲ್ಲಿ ಸರಾಸರಿ ಎಷ್ಟು ಬರುತ್ತದೋ ಅದಕ್ಕಿಂತ ಹತ್ತು ಪರ್ಸೆಂಟ್‌ವರೆಗೆ ಹೆಚ್ಚು ವಿದ್ಯುತ್ ಬಳಸಬಹುದು
– ಸರಾಸರಿಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಹಣ ಪಾವತಿ ಮಾಡಬೇಕಾಗುತ್ತದೆ
-ವಿದ್ಯುತ್ ದುರ್ಬಳಕೆ ಮಾಡದಂತೆ ತಡೆಯಲು ಈ ಷರತ್ತು ವಿಧಿಸಲಾಗಿದೆ
– ಜೂನ್ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಬೇಕು. ಜುಲೈನಿಂದ ವಿದ್ಯುತ್ ಫ್ರೀ. ಇದುವರೆಗೆ ಇರುವ ಬಾಕಿಯನ್ನು ಕಟ್ಟಲೇಬೇಕಾಗುತ್ತದೆ
ಗ್ಯಾರೆಂಟಿ ನಂಬರ್ ಟು – ಗೃಹ ಲಕ್ಷ್ಮೀ – ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ
– ಜೂನ್ 15 – ಜುಲೈ 15ರವರೆಗೆ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು
– ಜುಲೈ 15 – ಆಗಸ್ಟ್ 15ರವರೆಗೆ ಪರಿಶೀಲನೆ ಮಾಡಿ, ಆಗಸ್ಟ್ 15 ರಿಂದ ಯೋಜನೆ ಜಾರಿ
– ಮನೆಯ ಒಡತಿ ಅಕೌಂಟ್ ನಂಬರ್ ಹಾಗೂ ಆಧಾರ್ ಕಾರ್ಡ್ ಇತರೆ ಮಾಹಿತಿ ನೀಡಬೇಕು
-ಆಗಸ್ಟ್ 15ರಂದು ಮೊದಲ ಕಂತನ್ನು ಎಲ್ಲರ ಅಕೌಂಟ್‌ಗಳಿಗೆ ಹಣ ಪಾವತಿ ಮಾಡುತ್ತೇನೆ
-ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಹಣ ನೀಡಲಾಗುತ್ತದೆ
-ಪೆನ್ಷನ್ ಪಡೆಯುತ್ತಿರುವವರು ಯಜಮಾನಿಯಾಗಿದ್ದರೆ ಪೆನ್ಷನ್ ಜೊತೆಗೆ ಈ 2 ಸಾವಿರ ರೂಪಾಯಿಯನ್ನೂ ಕೊಡುತ್ತೇವೆ (ಸೋಷಿಯಲ್ ಸೆಕ್ಯೂರಿಟಿ ಪೆನ್ಷನ್ ಪಡೆಯುತ್ತಿರುವವರು)
ಗ್ಯಾರೆಂಟಿ ನಂಬರ್ ತ್ರೀ – ಅನ್ನಭಾಗ್ಯ – ಬಿಪಿಎಲ್ ಕಾರ್ಡ್‌ದಾರರಿಗೆ ಹತ್ತು ಕೆಜಿ ಅಕ್ಕಿ
-ಈ ತಿಂಗಳು ವಿತರಣೆಯಾಗಿದೆ, ಹೀಗಾಗಿ ಜುಲೈ 1 ರಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ಹತ್ತು ಅಕ್ಕಿ ಕೊಡುತ್ತೇವೆ
-ತಲಾ ಹತ್ತು ಕೆಜಿ ಆಹಾರ ಧಾನ್ಯಗಳನ್ನು ನೀಡುತ್ತೇವೆ
ಗ್ಯಾರೆಂಟಿ ನಂಬರ್ ಫೋರ್ – ಶಕ್ತಿ – ಈ ತಿಂಗಳು 11ಕ್ಕೆ ಚಾಲನೆ
-ಎಲ್ಲಾ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ
-ರಾಜ್ಯದ ಒಳಗಡೆ ಎಸಿ ಬಸ್ ಬಿಟ್ಟು ಬೇರೆ ಯಾವುದೇ ಸರ್ಕಾರಿ ಬಸ್‌ನಲ್ಲಿ ಉಚಿತವಾದ ಪ್ರಯಾಣ ಮಾಡಬಹುದು
-ರಾಜ್ಯದ ಒಳಗಡೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ
-ರಾಜ್ಯದ ನಾಗರಿಕಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ
-ಎಸಿ ಬಸ್, ಲಕ್ಸುರಿ ಬಸ್ ಹೊರತುಪಡಿಸಿ ಎಲ್ಲಾ ಬಸ್‌ಗಳಲ್ಲಿ ಪ್ರಯಾಣ ಉಚಿತ
-ಕರ್ನಾಟಕ ಸಾರಿಗೆ ಬಸ್ ಆಗಿದ್ದರೂ ಹೊರರಾಜ್ಯಕ್ಕೆ ಪ್ರಯಾಣಕ್ಕೆ ಉಚಿತವಿಲ್ಲ
-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಉಚಿತ
-ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಗಂಡಸರಿಗೆ ಶೇ.50 ರಿಸರ್ವೇಷನ್ ಮಾಡುತ್ತೇವೆ
-ಬಿಎಂಟಿಸಿಯಲ್ಲಿ ಯಾವುದೇ ರಿಸರ್ವೇಷನ್ ಇರೋದಿಲ್ಲ
-ಮಂಗಳಮುಖಿಯರಿಗೂ ಬಸ್ ಪ್ರಯಾಣ ಉಚಿತ
ಗ್ಯಾರೆಂಟಿ ನಂಬರ್ ಫೋರ್ – ಯುವನಿಧಿ – ನಿರುದ್ಯೋಗಿಗಳಿಗೆ 3000 ಹಾಗೂ 1500 ರೂ
-2022-23ರಲ್ಲಿ ಪಾಸಾದ ಪದವೀಧರರು ಹಾಗೂ ಡಿಪ್ಲೋಮಾ ದಾರರಿಗೆ ಕ್ರಮವಾಗಿ ಪ್ರತಿ ತಿಂಗಳೂ 3 ಸಾವಿರ ಹಾಗೂ 1500 ರೂಪಾಯಿ ನೀಡಲಾಗುತ್ತದೆ
-24 ತಿಂಗಳವರೆಗೆ ಮಾತ್ರ ಈ ಹಣ ನೀಡಲಾಗುತ್ತದೆ
-ಇಷ್ಟರೊಳಗೆ ಯಾರಿಗಾದರೂ ಕೆಲಸ ಸಿಕ್ಕರೆ ಅವರಿಗೆ ಹಣ ನೀಡಲಾಗುತ್ತವುದಿಲ್ಲ
-180 ದಿನಗಳಾದರೂ ಉದ್ಯೋಗ ಸಿಗದಿದ್ದವರಿಗೆ ಈ ಯೋಜನೆ ಅನ್ವಯ
-ಈ ಪದವಿ ಪಡೆದ ಆರು ತಿಂಗಳ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು