BengaluruPolitics

ಜೂನ್‌ 1ಕ್ಕೆ ಐದು ಗ್ಯಾರೆಂಟಿಗಳು ಬಹುತೇಕ ಜಾರಿ; ಏನೆಲ್ಲಾ ಷರತ್ತುಗಳಿರಬಹುದು..?

ಬೆಂಗಳೂರು; ಕಾಂಗ್ರೆಸ್‌ ಪ್ರಮುಖವಾಗಿ ಐದು ಗ್ಯಾರೆಂಟಿಗಳನ್ನು ಜರಿಗೆ ನೀಡಿತ್ತು. ಅವುಗಳನ್ನು ಜಾರಿ ಮಾಡೋದೇ ಅದಕ್ಕೆ ಈಗ ದೊಡ್ಡ ತಲೆನೋವಾಗಿದೆ. ಹಣ ಹೊಂದಿಸೋದು ಹೇಗೆ, ಫಲಾನುಭವಿಗಳನ್ನು ಗುರುತಿಸೋದು ಹೇಗೆ ಅನ್ನೋದೇ ಸರ್ಕಾರಕ್ಕಿರುವ ತಲೆನೋವು. ಈ ನಡುವೆ ವಿಪಕ್ಷಗಳು ಸರ್ಕಾರವನ್ನು ಲೇವಡಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಐದೂ ಗ್ಯಾರೆಂಟಿಗಳನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್‌ ಸರ್ಕಾರಕ್ಕೆ ಎದುರಾಗಿದೆ. ಹೀಗಾಗಿ ಸರ್ಕಾರ ಜೂನ್‌ ಒಂದರಿಂದಲೇ ಐದೂ ಗ್ಯಾರೆಂಟಿಗಳನ್ನು ಜಾರಿ ಮಾಡೋದಕ್ಕೆ ತಯಾರಿ ನಡೆಸಿದೆ. ಗುರುವಾರ ನಡೆಯುವ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಯೋಜನೆಗಳ ಜಾರಿ ಘೋಷಣೆ ಮಾಡುವ ಎಲ್ಲಾ ಸಾಧ್ಯತೆ ಇದೆ.

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡೋದಾಗಿ ಕಾಂಗ್ರೆಸ್‌ ಹೇಳಿತ್ತು. ಆದ್ರೆ, ಮನೆಯೊಡತಿ ಅಂದ್ರೆ ಯಾರು..?, ಮನೆಯಲ್ಲಿ ಅತ್ತೆ, ಸೊಸೆ ಇದ್ದರೆ ಇಬ್ಬರಲ್ಲಿ ಯಾರನ್ನು ಪರಿಗಣಿಸಬೇಕು..?, ಪ್ರತಿಯೊಂದು ಮನೆಯ ಒಡತಿಗೂ ಹಣ ಕೊಡಬೇಕೇ ಅಥವಾ ಬಡ ಮಹಿಳೆಯರಿಗಷ್ಟೇ ಕೊಡಬೇಕೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ, ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಕುತೂಹಲ ಕೆರಳಿಸಿದೆ. ಮೊದಲು ಕಾಂಗ್ರೆಸ್‌ ಎಲ್ಲಾ ಮನೆಯ ಒಡತಿಗೂ ಎಂದು ಹೇಳಿತ್ತು. ಹೀಗಾಗಿ ಈಗ ಷರತ್ತು ವಿಧಿಸಿದರೆ ವಿರೋಧ ಪಕ್ಷಗಳು ಹೋರಾಟ ನಡೆಸಬಹುದು. ಇನ್ನು ನಿರುದ್ಯೋಗ ಭತ್ಯೆ ನೀಡುವ ವಿಚಾರದಲ್ಲೂ ಗೊಂದಲ ಇದೆ. ಫಲಾನುಭವಿಗಳ ಆಯ್ಕೆ ತಲೆನೋವು ತರಿಸಿದೆ.

ಉಚಿತ ಬಸ್‌ ಪ್ರಯಾಣ, ಉಚಿತ ವಿದ್ಯುತ್‌ ನೀಡುವ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳು ಜೊತೆ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಕೊಟ್ಟ ಭರವಸೆಗಳನ್ನು ಜಾರಿ ಮಾಡೋದಕ್ಕೆ ಮುಂದಾಗಿದೆ.

Share Post