DistrictsTechTechnology

ಹೊಲದಲ್ಲಿ ಇಳಿಯಿತು ತರಬೇತಿ ವಿಮಾನ; ಏನಾಯ್ತು ಗೊತ್ತಾ..?

ಬೆಳಗಾವಿ; ಬೆಳಗಾವಿ ಬಳಿ ತರಬೇತಿ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೊಲವೊಂದರಲ್ಲಿ ವಿಮಾನ ಇಳಿದಿದ್ದು, ತರಬೇತುದಾರನ ಕಾಲಿಗೆ ಗಾಯವಾಗಿದೆ. ಆದ್ರೆ ಯಾವುದೇ ಅನಾಹುತವಾಗಿಲ್ಲ.

ಬೆಳಗಾವಿ ಬಳಿಯ ಹೊನ್ನಿಹಾಳ ಹೊರವಲಯದ ಮೋದಗಾ, ಬೇಗೇವಾಡಿ ರಸ್ತೆ ಬದಿಯಲ್ಲಿ ಈ ಘಟನೆ ನಡೆದಿದೆ. ತರಬೇತಿ ನಡೆಸುತ್ತಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಕೂಡಲೇ ಭೂಸ್ಪರ್ಶ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏರ್‌ಪೋರ್ಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Share Post