9 ಜಿಲ್ಲೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ; 8 ಜಿಲ್ಲೆಗಳಲ್ಲಿ 1, 7 ಜಿಲ್ಲೆಗಳಲ್ಲಿ 2
ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಬೆಂಗಳೂರು ನಗರ ಹಾಗೂ ಕರಾವಳಿ ಭಾಗ ಕೈ ಹಿಡಿಯದೇ ಇದ್ದಿದ್ದರೆ ಬಿಜೆಪಿ ಮತ್ತಷ್ಟು ಹೀನಾಯವಾಗಿ ಸೋಲುತ್ತಿತ್ತು. ಸುಮಾರು ಒಂಬತ್ತು ಜಿಲ್ಲೆಗಳಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಗೆದ್ದಿಲ್ಲ. ಎಂಟು ಜಿಲ್ಲೆಗಳಲ್ಲಿ ಕೇವಲ ತಾಲ ಒಂದು ಸ್ಥಾನದಲ್ಲಿ ಗೆದ್ದಿದೆ. ಏಳು ಜಿಲ್ಲೆಗಳಲ್ಲಿ ತಲಾ ಎರಡು ಸ್ಥಾನಗಳಲ್ಲಿ ಗೆಲ್ಲಿದೆ.
ಬಿಜೆಪಿ ಒಂದೂ ಸ್ಥಾನ ಗೆಲ್ಲದ ಜಿಲ್ಲೆಗಳು
ಚಿಕ್ಕಮಗಳೂರು
ಯಾದಗಿರಿ
ಬಳ್ಳಾರಿ
ಚಿಕ್ಕಬಳ್ಳಾಪುರ
ಕೋಲಾರ
ಕೊಡಗು
ರಾಮನಗರ
ಮಂಡ್ಯ
ಚಾಮರಾನಗರ
ಬಿಜೆಪಿ ಕಳಪೆ ಪ್ರದರ್ಶನದ ಜಿಲ್ಲೆಗಳು
ಒಂದೂ ಕ್ಷೇತ್ರ ಗೆಲ್ಲದ ಜಿಲ್ಲೆಗಳು – 09
ತಲಾ ಒಂದು ಕ್ಷೇತ್ರ ಗೆದ್ದ ಜಿಲ್ಲೆಗಳು – 08
ತಲಾ ಎರಡು ಕ್ಷೇತ್ರ ಗೆದ್ದ ಜಿಲ್ಲೆಗಳು – 07
ವಲಯವಾರು ಬಿಜೆಪಿ ಗೆದ್ದ ಕ್ಷೇತ್ರಗಳೆಷ್ಟು..?
ಹಳೇ ಮೈಸೂರು ಭಾಗ – 61 ರಲ್ಲಿ 6 ಗೆಲುವು
ಉತ್ತರ ಕರ್ನಾಟಕ ಭಾಗ – 50 ರಲ್ಲಿ 16 ಗೆಲುವು
ಕರಾವಳಿ ಕರ್ನಾಟಕ – 19 ರಲ್ಲಿ 12 ಗೆಲುವು
ಮಧ್ಯ ಕರ್ನಾಟಕ – 25 ರಲ್ಲಿ 5 ಗೆಲುವು
ಬೆಂಗಳೂರು ನಗರ – 28 ರಲ್ಲಿ 15 ಗೆಲುವು