ಹೊಸಬರಿಗೆ ಟಿಕೆಟ್ ಕೊಟ್ಟಿದ್ದೇ ಬಿಜೆಪಿಗೆ ಮುಳುವಾಯ್ತಾ.?; 75ರಲ್ಲಿ 19 ಮಾತ್ರ ಗೆಲುವು..!
ಬೆಂಗಳೂರು; ಉತ್ತರ ಪ್ರದೇಶ, ಗುಜರಾತ್ ರೀತಿಯಲ್ಲಿ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಕೂಡಾ ಹೊಸಬರಿಗೆ ಮಣೆ ಹಾಕಿತ್ತು. ಹಿರಿಯರಿಗೆ ಟಿಕೆಟ್ ನಿರಾಕರಿಸಿ ಹಲವು ಹೊಸ ಮುಖಗಳನ್ನು ಪರಿಚಯಿಸಲಾಗಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್ ಬಳಸಿದ ಈ ಅಸ್ತ್ರದಿಂದ ಪ್ರಯೋಜವಾಗಿಲ್ಲ. ಹೊಸ ಮುಖಗಳೇ ಹೆಚ್ಚು ಸೋತಿದ್ದಾರೆ. ಬಿಜೆಪಿ ಹೀನಾಯ ಸೋಲಿಗೆ ಹೊಸಮುಖ ಕಾರಣವಾದಂತೆ ಕಾಣುತ್ತಿದೆ.
ಈ ಬಾರಿ 75 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕಟ್ ನೀಡಲಾಗಿತ್ತು. ಆದ್ರೆ ಅದರಲ್ಲಿ 19 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದ 56 ಕ್ಷೇತ್ರಗಳಲ್ಲಿ ಸೋಲನುಭವಿಸಿದೆ.
ಹೊಸದಾಗಿ ಗೆದ್ದ ಬಿಜೆಪಿ 19 ಶಾಸಕರು ಯಾರು..?
ಮಹದೇವಪುರ – ಮಂಜುಳ ಲಿಂಬಾವಳಿ
ಹುಬ್ಬಳ್ಳಿ-ಧಾರವಾಡ ಕೇಂದ್ರ – ಮಹೇಶ್ ಟೆಂಗಿನಕಾಯಿ
ಹುಕ್ಕೇರಿ – ನಿಖಿಲ್ ಕತ್ತಿ
ಖಾನಾಪುರ – ವಿಠಲ್ ಹಲಗೇಕರ್
ಬೈಂದೂರು – ಗುರುರಾಜ್ ಗಂಟಿಹೊಳ
ಕಾಪು – ಗುರ್ಮೆ ಸುರೇಶ್ ಶೆಟ್ಟಿ
ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ
ಉಡುಪಿ – ಯಶಪಾಲ್ ಸುವರ್ಣ
ಬೇಲೂರು – ಹುಲ್ಲಳ್ಳಿ ಸುರೇಶ್
ಸಕಲೇಶಪುರ – ಸಿಮೆಂಟ್ ಮಂಜು
ಸುಳ್ಯ – ಭಾಗೀರಥಿ ಮುರುಳ್ಯ
ಶಿಕಾರಿಪುರ – ಬಿ.ವೈ. ವಿಜಯೇಂದ್ರ
ಕೃಷ್ಣರಾಜ – ಟಿ.ಎ. ಶ್ರೀವತ್ಸ
ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು
ಜಮಖಂಡಿ – ಜಗದೀಶ್ ಗುಡಗಂಟಿ
ಶಿರಹಟ್ಟಿ – ಡಾ.ಚಂದ್ರು ಲಮಾಣಿ
ಶಿವಮೊಗ್ಗ ನಗರ- ಚನ್ನಬಸಪ್ಪ
ಹುಮ್ನಾಬಾದ್ – ಸಿದ್ದು ಪಾಟೀಲ್