BengaluruCrimePolitics

Karnataka Election; ಬುಧವಾರ ಮತದಾನ; ಭದ್ರತೆ ಹೇಗಿದೆ ಗೊತ್ತಾ..?

ಬೆಂಗಳೂರು; ಬುಧವಾರ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಪೊಲೀಸ್‌ ಇಲಾಖೆಯಿಂದ ಬಿಗಿ ಭದ್ರತೆ ಮಾಡಲಾಗುತ್ತಿದೆ. ಅದಕ್ಕಾಗಿ ಸುಮಾರು 1.60 ಲಕ್ಷ ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಭದ್ರತಾ ಕಾರ್ಯದಲ್ಲಿರುವ ಒಟ್ಟು ಸಿಬ್ಬಂದಿ – 1.60 ಲಕ್ಷ
ಡಿವೈಎಸ್​ಪಿ – 304 ಮಂದಿ
ಪೊಲೀಸ್​ ಇನ್ಸ್​ಪೆಕ್ಟರ್​ – 991 ಮಂದಿ
ಪಿಎಸ್​ಐ – 2,610 ಮಂದಿ
ಎಎಸ್​ಐ – 5,803 ಮಂದಿ
ಇತರೆ ಸಿಬ್ಬಂದಿ – 84,000 ಮಂದಿ
ಹೋಂಗಾರ್ಡ್​​ – 8,500 ಮಂದಿ
ಸಿಆರ್‌ಪಿಎಫ್‌, ಕೆಎಸ್‌ಆರ್‌ಪಿ ತುಕಡಿ – 650

ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭದ್ರತೆ ಯಾವತ್ತೂ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ.

– ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣದಲ್ಲಿ ಹೆಚ್ಚಿನ ನಿಗಾ
– 11,617 ಸೂಕ್ಷ್ಮ ಮತಗಟ್ಟೆಗಳು

ಬೆಂಗಳೂರಿನಲ್ಲಿ ಹೇಗಿದೆ ಪೊಲೀಸ್ ಭದ್ರತೆ?
ಬೆಂಗಳೂರು ನಗರದ್ಯಾಂತ 16 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 13 ಸಾವಿರ ಪೊಲೀಸರು, KSRP ಹಾಗೂ ಹೋಮ್ ಗಾರ್ಡ್​ಗಳು ಸೇರಿ‌ದಂತೆ ಒಟ್ಟು 16 ಸಾವಿರ ಸಿಬ್ಬಂದಿ. ಬೆಂಗಳೂರು ನಗರದಲ್ಲಿ ಒಟ್ಟು 7916 ಮತಗಟ್ಟೆಗಳಿವೆ. ಅದರಲ್ಲಿ 1907 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ BSF, RPF, CRPF ಹಾಗೂ SAP ನಿಯೋಜನೆ ಮಾಡಲಾಗಿದೆ.

Share Post