BengaluruCrimePolitics

ಬೈಲಹೊಂಗಲದಲ್ಲಿ 1800 ಕುಕ್ಕರ್‌ ಜಪ್ತಿ; ಯಾರಿಗೆ ಸೇರಿದ್ದು ಗೊತ್ತಾ..?

ಬೆಳಗಾವಿ; ಮತದಾನದ ದಿನ ಹತ್ತಿರಕ್ಕೆ ಬರುತ್ತಿದ್ದಂತೆ ಅಕ್ರಮಗಳೂ ಜೋರಾಗುತ್ತಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಕ್ಷೇತ್ರದ ಗ್ರಾಮವೊಂದರಲ್ಲಿ ಅಪಾರ ಪ್ರಮಾಣದ ಕುಕ್ಕರ್‌ಗಳು ಪತ್ತೆಯಾಗಿದೆ. ಇವತ್ತು ಚುನಾವಣೆಯಲ್ಲಿ ಹಂಚಲು ತರಲಾಗಿತ್ತು ಎಂದು ತಿಳಿದುಬಂದಿದೆ. ಆದ್ರೆ ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಮಾತ್ರ ತಿಳಿದುಬಂದಿಲ್ಲ.

ತಡಸಲೂರ ಗ್ರಾಮದ ಮನೆಯೊಂದರಲ್ಲಿ ಕುಕ್ಕರ್‌ಗಳು ಪತ್ತೆಯಾಗಿವೆ. ಸುಮಾರು 1800 ಕುಕ್ಕರ್‌ಗಳು ಸಿಕ್ಕಿದ್ದು, ಒಂದು ಕುಕ್ಕರ್‌ ಬೆಲೆ ಅಂದಾಜು 1400 ಎಂದು ಹೇಳಲಾಗಿದೆ. ಒಟ್ಟು ಮೌಲ್ಯ 25 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಕುಕ್ಕರ್‌ಗಳ ಮೇಲೆ ಯಾವುದೇ ಪಕ್ಷದ ಚಿಹ್ನೆಯಾಗಲೀ, ಹೆಸರಾಗಲೀ ಇಲ್ಲ. ಹೀಗಾಗಿ ಇದು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Share Post