BengaluruPolitics

Modi Tweet; ಬೆಂಗಳೂರಿಗರಿಗೆ ಬಿಜೆಪಿ ಬೇಕು ಅನ್ನೋದು ಸ್ಪಷ್ಟವಾಗಿದೆ; ಖುಷಿ ಹಂಚಿಕೊಂಡ ಮೋದಿ

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿನಲ್ಲಿ ಸುಮಾರು 26.5 ಕಿಲೋಮೀಟರ್‌ ರೋಡ್‌ ಶೋ ವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ರೋಡ್‌ ಶೋನಲ್ಲಿ ಸುಮಾರು 13 ವಿಧಾನಸಭಾ ಕ್ಷೇತ್ರಗಳನ್ನು ಕವರ್‌ ಮಾಡಲಾಗಿದೆ. ಪ್ರಧಾನಿ ಮೋದಿಯನ್ನು ನೋಡಿ ಲಕ್ಷ ಲಕ್ಷ ಜನ ಸೇರಿದ್ದರು. ಎಲ್ಲಿ ನೋಡಿದರೂ ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ ಜನರು, ಮೋದಿ ಕಡೆ ಕೈಬೀಸುತ್ತಿರುವುದು ಕಂಡುಬಂತು. ಮೋದಿಯವರ ಫೋಟೋಗಳನ್ನೂ ಜನ ಸೆರೆಹಿಡಿದುಕೊಂಡರು. ಖುಷಿಯಿಂದ ಮೋದಿಗೆ ಜೈಕಾರ ಕೂಗಿದರು.

ಇನ್ನು ಇದೇ ಖುಷಿಯಲ್ಲಿ ಪ್ರಧಾನಿ ಮೋದಿಯವರು ಕೂಡಾ ಟ್ವೀಟ್‌ ಮಾಡಿದ್ದಾರೆ. ಬೆಂಗಳೂರಿನ ಜನರು ತೋರಿಸಿದ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿಗೆ ಬಿಜೆಪಿ ಬೇಕು ಎಂಬುದು ಸ್ಪಷ್ಟವಾಗಿದೆ. ನಮ್ಮ ಪಕ್ಷವು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಮುಂದುವರಿಸುತ್ತದೆ ಎಂದು ಈ ನಗರದ ಜನ  ನಂಬಿದ್ದಾರೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಒಂದಷ್ಟು ಫೋಟೋಗಳನ್ನು ಕೂಡಾ ಮೋದಿ ಹಂಚಿಕೊಂಡಿದ್ದಾರೆ.

Share Post