BengaluruPolitics

AMBULANCE; ಮೋದಿ ರೋಡ್‌ ಶೋ ವೇಳೆ ನಕಲಿ ಅಂಬುಲೆನ್ಸ್‌ ಬಿಡುತ್ತಾ ಕಾಂಗ್ರೆಸ್‌..?; ಏನಿದು ಆರೋಪ..?

ಬೆಂಗಳೂರು; ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ಶನಿವಾರ ಹಾಗೂ ಭಾನುವಾರ ಮೆಗಾ ರೋಡ್‌ ಶೋ ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೊತೆಗೆ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಈಗಾಗಲೇ ಮೂರು ಬಾರಿ ರೂಟ್‌ ಮ್ಯಾಪ್‌ ಹಾಗೂ ಸಮಯಗಳನ್ನು ಬದಲಾವಣೆ ಮಾಡಲಾಗಿದೆ. ಈ ನಡುವೆ ಮೋದಿ ರೋಡ್‌ ಶೋಗೆ ತೊಂದರೆ ಕೊಡುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹಾಗೂ ಭಾನುವಾರದಂದು ಬೆಂಗಳೂರಿನಲ್ಲಿ ಸುಮಾರು 35 ಕಿಲೋ ಮೀಟರ್‌ನಷ್ಟು ರೋಡ್‌ ಶೋ ನಡೆಸೋದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ವೇಳೆ ಮೋದಿಗೆ ಕಟ್ಟೆ ಹೆಸರು ತರಲು ಕಾಂಗ್ರೆಸ್‌ ಷಡ್ಯಂತ್ರ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ ನಾಯಕರು ಮೋದಿ ರೋಡ್‌ ಶೋ ವೇಳೆ ನಕಲಿ ಆಂಬುಲೆನ್ಸ್‌ ಕಳುಹಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಅಂಬುಲೆನ್ಸ್‌ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಆದರೂ ರೋಡ್‌ ಶೋ ಅಡ್ಡಿಪಡಿಸಲು ಹುನ್ನಾರ ನಡೆದಿದೆ. ನಕಲಿ ಅಂಬುಲೆನ್ಸ್‌ಗಳು ಸಂಚಾರ ಮಾಡುವ ಸಾಧ್ಯತೆ ಇದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಹೀಗಾಗಿ ಅಂಬುಲೆನ್ಸ್‌ ಬಂದರೂ ಅದರಲ್ಲಿ ರೋಗಿ ಇದ್ದಾರೋ ಇಲ್ಲವೋ, ರೋಗಿ ಇದ್ದರೆ ಆತ ನಿಜವಾಗಿಯೂ ರೋಗಿಯೇ ಎಂಬುದನ್ನು ಪರಿಶೀಲನೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇದಕ್ಕೆ ಡಿ.ಕೆ.ಶಿವಕುಮಾರ್‌ ಸಮಜಾಯಿಷಿ ಏನು..?; ಶೋಭಾ ಕರಂದ್ಲಾಜೆ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಸೋಲುವ ಹತಾಶೆಯಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಒಂದು ವೇಳೆ ನಕಲಿ ಅಂಬುಲೆನ್ಸ್‌ಗಳು ಸುತ್ತಾಡಿದರೆ ಅವರನ್ನು ಅರೆಸ್ಟ್‌ ಮಾಡಲಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post