Congress; ಸಿಎಂ ಹುದ್ದೆ 2500 ಕೋಟಿಗೆ ಹರಾಜಾಗಿದ್ದರಾ..?; ಏನಿದು ಆರೋಪ..?
ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಹುದ್ದೆ 2500 ಕೋಟಿ ರೂಪಾಯಿ ಹಾಗೂ ಸಚಿವ ಸ್ಥಾನ 500 ಕೋಟಿ ರೂಪಾಯಿಗೆ ಹರಾಜಾಗಿತ್ತು ಎಂದು ಎಐಸಿಸಿ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ ಗಂಭಿರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನಾವು ಹೇಳುತ್ತಿಲ್ಲ. ಅವರ ಪಕ್ಷದ ಶಾಸಕರೇ ಹೇಳಿದ್ದಾರೆ ಎಂದಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಎಲ್ಲದರಲ್ಲೂ ವ್ಯಾಪಾರ ನಡೆದಿದೆ. ಮಂತ್ರಿ ಪದವಿಗಳನ್ನು ಹರಾಜಿಗಿಡಲಾಗಿತ್ತು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲೂ ಸಾಕಷ್ಟು ಅಕ್ರಮ ನಡೆದಿದೆ. ಉಪಕುಲಪತಿ ಹುದೆಗಳನ್ನು ಕೂಡಾ ಹರಾಜಿಗಿಡಲಾಗಿತ್ತು. ಹಣ ಕೊಟ್ಟ ಒಬ್ಬರು ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದಾರೆ ಎಂದು ಪವನ್ ಖೇರಾ ಆರೋಪ ಮಾಡಿದ್ದಾರೆ.
ಬಿಡಿಎ ಆಯುಕ್ತ ಹುದ್ದೆ ಗೆ ೧೫ ಕೋಟಿ, ತಹಸೀಲ್ದಾರ್ ಹುದ್ದೆಗೆ 50 ಲಕ್ಷ ರೂಪಾಯಿ ಹೀಗೆ ಎಲ್ಲಾ ನೇಮಕಾತಿಗೂ ಹಣ ಪಡೆಯಲಾಗಿದೆ ಎಂದು ಪವನ್ ಖೇರಾ, ಭ್ರಷ್ಟಾಚಾರದ ದರಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ. ಆದ್ರೆ ಇದೆಲ್ಲವನ್ನೂ ಮುಚ್ಚಿಕೊಳ್ಳಲು ವಿಷಯಾಂತರ ಮಾಡಲು ಹೊರಟಿದ್ದಾರೆ. ಆದ್ರೆ ಜನರಿಗೆ ಎಲ್ಲವೂ ಗೊತ್ತಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಸಾಕಾಗಿ ಹೋಗಿದ್ದಾರೆ ಎಂಂದು ಪವನ್ ಖೇರಾ ಹೇಳಿದ್ದಾರೆ.