DistrictsPolitics

ಕಾಂಗ್ರೆಸ್‌ ಪಕ್ಷದ್ದು 85 ಪರ್ಸೆಂಟ್‌ ಭ್ರಷ್ಟಾಚಾರಾನಾ..?; ಸಿಎಂ ಬೊಮ್ಮಾಯಿ

ಬೆಳಗಾವಿ; ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ದೆಹಲಿಯಿಂದ ನೂರು ರೂಪಾಯಿ ಬಿಡುಗಡೆ ಮಾಡಿದರೆ ಹಳ್ಳಿಗೆ 15 ರೂಪಾಯಿ ಮಾತ್ರ ಮುಟ್ಟಿರುತ್ತದೆ ಎಂದು ಹೇಳಿದ್ದರು. ಹಾಗಾದ್ರೆ ಕಾಂಗ್ರೆಸ್‌ ಪಕ್ಷದ್ದು 85 ಪರ್ಸೆಂಟ್‌ ಭ್ರಷ್ಟಾಚಾರಾನಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಸಿಎಂ ಬೊಮ್ಮಾಯಿಯವರು, ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರಕ್ಕೆ ಹೆಸರು, ಅದು ಭ್ರಷ್ಟಾಚಾರದ ಅವಿಭಾಜ್ಯ ಅಂಗ ಎಂದು ಆರೋಪ ಮಾಡಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಆಗಿತ್ತು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ತಲೆದಿಂಬು, ಹಾಸಿಗೆ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಸಿಎಂ ಬೊಮ್ಮಾಯಿ ಆರೋಪ ಮಾಡಿದರು.

Share Post