DistrictsPolitics

ED ಅಂದರೆ ಎಲೆಕ್ಷನ್‌ ಡಿಪಾರ್ಟ್‌ಮೆಂಟ್‌ ಆಫ್‌ ಬಿಜೆಪಿ; ರಣದೀಪ್‌ ಸುರ್ಜೇವಾಲಾ

ಮೈಸೂರು; ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಜನರ ಭಾವನೆಗಳ ಮೇಲೆ ಆಟ ಆಡುತ್ತಿದೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ED ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ ಅಂದರೆ ಎಲೆಕ್ಷನ್‌ ಡಿಪಾರ್ಟ್‌ಮೆಂಟ್‌ ಆಫ್‌ ಬಿಜೆಪಿ ಎಂದು ಹೇಳಿದ್ದಾರೆ.

ಇನ್ನು ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನಕ್ಕೆ ಮೋಸ ಮಾಡಲಾಗಿದೆ ಎಂದು ಆರೋಪಿಸಿರುವ ರಣದೀಪ್‌ ಸುರ್ಜೇವಾಲಾ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒಂಬತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

ಸುರ್ಜೇವಾಲಾ ಅವರು ಕೇಳಿದ ಒಂಬತ್ತು ಪ್ರಶ್ನೆಗಳು;
==============================
೧. ಚುನಾವಣಾ ಸಮಯದಲ್ಲಿ ಮೀಸಲಾತಿ ಹಂಚಿಕೆ ಮಾಡಿದಿರಿ. ಸುಪ್ರೀಂಕೋರ್ಟ್‌ನಲ್ಲಿ ಅದನ್ನು ಯಾಕೆ ಸಮರ್ಥಿಸಲಿಲ್ಲ..?
೨. ಎಸ್‌ಸಿ, ಎಸ್‌ಟಿ ಸಮುದಾಯ, ಲಿಂಗಾಯತರು, ಒಕ್ಕಲಿಗರ ಮೇಲೆ ಮೀಸಲಾತಿಯ ವಂಚನೆಯ ಆಟ ಏಕೆ ಆಡುತ್ತಿದ್ದೀರಿ..?
೩. ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸುವಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಯಾಕೆ ವಿಫಲವಾಯಿತು..?
೪. ನೀವು ಒಳ್ಳೆಯ ಉದ್ದೇಶಕ್ಕೆ ಮೀಸಲಾತಿ ನೀಡಿದ್ದೀರಿ ಅಂದರೆ ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಎಡವಿದಿರಿ..?
೫. ಮಾರ್ಚ್ 14 ರಂದು ಎಸ್​ಸಿ-ಎಸ್​ಟಿಗಳಿಗೆ ನೀಡಿರುವ ಹೆಚ್ಚುವರಿ ಮೀಸಲಾತಿಯನ್ನು ಸಂಸತ್ತಿನಲ್ಲಿ ಏಕೆ ತಿರಸ್ಕರಿಸಲಾಯಿತು..?
೬. ನೀವು ಮೀಸಲಾತಿಯನ್ನು ಶೇ.50ನ್ನು ಹೆಚ್ಚಿಸದೇ ಯಾಕೆ ನಿರಾಕರಣೆ ಮಾಡುತ್ತಿದ್ದೀರಿ..?
೭. ಎಸ್​ಸಿ-ಎಸ್​ಟಿಗೆ ಹೆಚ್ಚಳ ಮಾಡಿದ ಮೀಸಲಾತಿಯ ಕಾನೂನನ್ನು ಸಂವಿಧಾನದ IX ನೇ ಶೆಡ್ಯೂಲ್‌ನಲ್ಲಿ ಏಕೆ ಹಾಕಲಿಲ್ಲ..?
೮. ಅಲ್ಪಸಂಖ್ಯಾತರ ಮೀಸಲಾತಿಯನ್ನು ಯಾಕೆ ನೀವು ಟಾರ್ಗೆಟ್‌ ಮಾಡಿದ್ದೀರಿ..?
೯. ಲಿಂಗಾಯತರು, ಒಕ್ಕಲಿಗರು, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಸರಲ್ಲಿ ಬಿಜೆಪಿ ದ್ರೋಹ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಜನರ ಕ್ಷಮೆಯಾಚಿಸುತ್ತಾರಾ..?

Share Post