CinemaDistricts

ಮಂಗಳೂರಿನ ಕಾಡುಗಳಲ್ಲಿ ಪೂಜಾ ಹೆಗ್ಡೆ ಸುತ್ತಾಟ

ಮಂಗಳೂರು; ನಟಿ ಪೂಜಾ ಹೆಗ್ಡೆ ಕೂಡಾ ಮಂಗಳೂರಿನ ಮೂಲದವರೇ ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರು ಆಗಾಗ ತಮ್ಮ ಹುಟ್ಟೂರಿಗೆ ಬರುತ್ತಿರುತ್ತಾರೆ ಕೂಡಾ. ಹೀಗೆ ಈ ಬಾರಿ ಹುಟ್ಟೂರಿಗೆ ಬಂದ ಪೂಜಾ ಹೆಗ್ಡೆ ಮಂಗಳೂರಿನಲ್ಲಿ ಕಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ಯುಸಿ ಶೆಡ್ಯೂಲ್‌ ನಡುವೆ ತಮ್ಮ ಹುಟ್ಟೂರಿಗೆ ಬಂದಿರುವ ಪೂಜಾ ಹೆಗ್ಡೆ, ಕಾಡಿನಲ್ಲಿ ಸುತ್ತಾಡಿದ್ದಾರೆ. ಬಿಸಿಲಿನ ಬೇಗೆಯ ನಡುವೆಯೂ ಅವರು ಕಾಡಿನಲ್ಲಿ ಸುತ್ತಾಡಿ, ಕಾಡಿನ ಹಣ್ಣುಗಳನ್ನು ಕಿತ್ತು ತಿಂದಿದ್ದಾರೆ. ಹೆಬ್ಬಲಸು ಕಿತ್ತುಕೊಂಡು ಪೂಜಾ ಹೆಗ್ಡೆ ತಿಂದಿದ್ದು, ಆ ಫೋಟೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಇನ್ನು ತಮ್ಮ ನೆಚ್ಚಿನ ನಾಯಿಯ ಜೊತೆ ಆಟವಾಡುವುದರ ಜೊತೆ ಮಂಗಳೂರಿನ ರುಚಿಯಾದ ಮೀನಿನ ಊಟವನ್ನೂ ಸವಿದಿದ್ದಾರಂತೆ.

 

Share Post