BengaluruCinemaHealth

ಕನ್ನಡದ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ ನಿಧನ

ಬೆಂಗಳೂರು; ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ ನಿಧನರಾಗಿದ್ದಾರೆ. 45 ವರ್ಷ ವಯಸ್ಸಿನ ಟಪೋರಿ ಸತ್ಯ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾದಗೇ ಸತ್ಯ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

 

ಶ್ವಾಸಕೋಶ ಸಮಸ್ಯೆಯಿಂದ ಟಪೋರಿ ಸತ್ಯ ಬಳಲುತ್ತಿದ್ದರು. ಒಂದು ವಾರದಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗಿಲ್ಲ. ಬನಶಂಕರಿ ಮೂರನೇ ಹಂತದಲ್ಲಿರುವ ನಿವಾಸದಲ್ಲಿ ಟಪೋರಿ ಸತ್ಯ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

 

ಟಪೋರಿ ಸತ್ಯ ಅವರು ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ನಂದ ಲವ್ಸ್‌ ನಂದಿತಾ ಸೇರಿದ್ದಂತೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟಪೋರಿ ಸತ್ಯ ನಟನೆ ಮಾಡಿದ್ದಾರೆ. ಅವರು ಮೇಳ ಎಂಬ ಸಿನಿಮಾವನ್ನು ನಿರ್ದೇಶನ ಕೂಡಾ ಮಾಡಿದ್ದಾರೆ.

 

Share Post