BengaluruPolitics

ಇಂದು ರಾತ್ರಿ ಕಾಂಗ್ರೆಸ್‌ ಮೂರನೇ ಪಟ್ಟಿ ರಿಲೀಸ್‌ ಸಾಧ್ಯತೆ

ಬೆಂಗಳೂರು; ಕಾಂಗ್ರೆಸ್‌ ಈಗಾಗಲೇ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದ್ರೆ, ಉಳಿದ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಷ್ಟವಾಗಿತ್ತು. ಇದೀಗ ಅಳೆದೂ ತೂಗಿ ಮೂರನೇ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಇಂದು ರಾತ್ರಿ ಕಾಂಗ್ರೆಸ್‌ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು. ಅನಂತರದ ಪಟ್ಟಯಲ್ಲಿ 42 ಕ್ಷೇತ್ರಗಳಿಗೆ ಟಿಕೆಟ್‌ ಅನೌನ್ಸ್‌ ಮಾಡಲಾಯಿತು. ಇನ್ನು ಉಳಿದಿರೋದು 58 ಕ್ಷೇತ್ರ. ಉಳಿದ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಮೂರು ನಾಲ್ಕು ಪ್ರಬಲ ಆಕಾಂಕ್ಷಿಗಳಿದ್ದರು. ಲಾಬಿ ಹೆಚ್ಚಾಗದ್ದರಿಂದ ಹೈಕಮಾಂಡ್‌ ಅಲೆದೂತೂಗಿ ಆಯ್ಕೆ ಮಾಡಬೇಕಿತ್ತು. ಹೀಗಾಗಿ ಹಲವು ಸುತ್ತಿನ ಮಾತುಕತೆಗಳನ್ನು ಮಾಡಲಾಗಿದೆ. ಕೊನೆಗೂ ಪಟ್ಟಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಇಂದು ರಾತ್ರಿ ಮೂರನೇ ಪಟ್ಟಿ ರಿಲೀಸ್‌ ಆಗಲಿದೆ ಎಂದು ತಿಳಿದುಬಂದಿದೆ.

Share Post