ದುಡುಕಿನ ನಿರ್ಧಾರ ಬೇಡ; ಸವದಿಗೆ ಬೊಮ್ಮಾಯಿ ಸಲಹೆ
ಬೆಂಗಳೂರು; ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಂಡು ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮಣ ಅವದಿಯವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇವೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದೇನೆ. ಅವರಿಗೆ ಪಕ್ಷದಲ್ಲಿ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದು ಸಿಎಂ ಹೇಳಿದ್ದಾರೆ.
ಸವದಿಯವರಿಗೆ ಟಿಕೆಟ್ ಸಿಗದಿದ್ದಕ್ಕೆ ಬೇಶರಗೊಂಡಿದ್ದಾರೆ. ಈ ಬೇಸರದಲ್ಲಿ ಕೆಲವೊಂದು ವಿಚಾರ ಹೇಳಿರಬಹುದು. ಆದ್ರೆ, ಎಲ್ಲವೂ ಸರಿಹೋಗಲಿದೆ. ನನಗೆ ವಿಶ್ವಾಸವಿದೆ, ಅವರಿಗೆ ಇದೇ ಪಕ್ಷದಲ್ಲಿ ಭವಿಷ್ಯವಿದೆ. ಸವದಿ ಬಿಜೆಪಿಯಲ್ಲೇ ಇರಲಿದ್ದಾರೆ ಎಂಬ ವಿಶ್ವಾಸವನ್ನು ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.