Districts

ಚಾಮುಂಡಿ ತಪ್ಪಲಿನ ಭೂಮಿ ರಾಜಮನೆತನದ್ದು: ಸುಪ್ರೀಂ ತೀರ್ಪು

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ 1,536 ಎಕರೆ ಭೂವಿವಾದದ ಸಂಬಂಧ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಬಿಗ್‌ ಶಾಕ್‌ ನೀಡಿದೆ. ಈ ಭೂಮಿ ವಿಚಾರದಲ್ಲಿ ಮೈಸೂರು ರಾಜಮನೆತನದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ 1536 ಎಕರೆ ಜಾಗವನ್ನು ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಮುಂದಾಗಿತ್ತು. ಆದರೆ, ಮೈಸೂರು ರಾಜಮನೆತನ ಆ ಜಮೀನು ತಮ್ಮದೆಂದು ವಾದಿಸಿತ್ತು. ಕುರುಬಾರಹಳ್ಳಿ, ಆಲನಹಳ್ಳಿ, ಚೌಡಳ್ಳಿಯ 1,536 ಎಕರೆ ಭೂಮಿ ತಮಗೆ ಸೇರಿದೆ ಎಂದು ರಾಜಮನೆತನದವರು ವಾದಿಸಿದ್ರೆ, ಇದು ಸರ್ಕಾರದ ಆಸ್ತಿ ಎಂದು ರಾಜ್ಯ ಸರ್ಕಾರ ವಾದಿಸಿತ್ತು. ಈ ಸಂಬಂಧ ಹತ್ತಾರು ವರ್ಷಗಳಿಂದ ನಡೆದ ಕೋರ್ಟ್ ವ್ಯಾಜ್ಯದಲ್ಲಿ ರಾಜಮನೆತನದ ಪರವಾಗಿ  ಕೆಳ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಹೈಕೋರ್ಟ್‌ ಕೂಡಾ ಎತ್ತಹಿಡಿದಿತ್ತು. ಇದೀಗ ಸುಪ್ರೀಂ ಕೋರ್ಟ್‌ ಕೂಡಾ ರಾಜಮನೆತನದ ಪರವಾಗಿ ತೀರ್ಪು ನೀಡಿದೆ.

Share Post