CrimeDistrictsPolitics

ಖಾಸಗಿ ಬಸ್‌ನಲ್ಲಿ ಕಂತೆ ಕಂತೆ ಹಣ; 2 ಕೋಟಿ ನಗದು ವಶ

ಬೆಳಗಾವಿ; ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಅಕ್ರಮಗಳು ಜೋರಾಗುತ್ತಿವೆ. ಇಂದು ಬೆಳ್ಳಂಬೆಳಗ್ಗೆ ಚುನಾವಣಾಧಿಕಾರಿಗಳು ಭಾರಿ ಮೊತ್ತದ ಹಣವನ್ನು ಜಪ್ತಿ ಮಾಡಿದ್ದಾರೆ. ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
     ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ ಬಳಿ ಪರಿಶೀಲನೆ ವೇಳೆ ಬಸ್‌ನಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ವ್ಯಕ್ತಿಯೊಬ್ಬ ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಬ್ಯಾಗ್‌ ಪರಿಶೀಲಿಸಿದಾಗ ಭಾರಿ ಮೊತ್ತದ ಹಣ ಸಿಕ್ಕಿದೆ. ಆದ್ರೆ ಇದಕ್ಕೆ ಆತ ಸೂಕ್ತ ದಾಖಲೆ ಒದಗಿಸಿಲ್ಲ. ಈ ಕಾರಣದಿಂದಾಗಿ ಹಣ ಬ್ಯಾಗ್‌ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

     ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post