Bengaluru

ಮೈಸೂರು-ಬೆಂಗಳೂರು ಹೆದ್ದಾರಿ ಟೋಲ್‌ ದರ ಹೆಚ್ಚಳಕ್ಕೆ ತಡೆ

ರಾಮನಗರ; ಮೈಸೂರು-ಬೆಂಗಳೂರು ದಶಪಥ ರಸ್ತೆಯ ಟೋಲ್‌ನ್ನು ಇಂದಿನಿಂದ ಹೆಚ್ಚಳ ಮಾಡಲಾಗಿತ್ತು. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿದೆ. ಸದ್ಯಕ್ಕೆ ಆದೇಶ ಹಿಂಪಡೆಯಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ದಶಪಥ ರಸ್ತೆ ಉದ್ಘಾಟನೆಯಾಗಿ 17 ದಿನಗಳು ಕಳೆದಿವೆ. ಹೀಗಿರುವಾಗಲೇ ಟೋಲ್‌ ದರ ಏರಿಕೆ ಮಾಡಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಗ್ಗೆಯಿಂದ ಟೋಲ್‌ ದರ ಏರಿಕೆ ಮಾಡಬೇಕಿತ್ತು. ಆದ್ರೆ, ರಾಜ್ಯಾದ್ಯಂತ ಇದಕ್ಕೆ ವಿರೋಧ ವ್ಯಕ್ತವಾಯಿತು. ಯಾವುದೇ ಕಾರಣಕ್ಕೂ ಟೋಲ್‌ ದರ ಏರಿಕೆ ಮಾಡಬಾರದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೋರಾಟಗಳು ನಡೆದವು. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಟೋಲ್‌ ಏರಿಕೆಯನ್ನು ಮುಂದೂಡಿದೆ.

Share Post