ಬೆಂಗಳೂರು-ಮೈಸೂರು ದಶಪಥ ರಸ್ತೆ ಟೋಲ್ ಸಂಗ್ರಹ; ಮೊದಲ ದಿನವೇ ತಾಂತ್ರಿಕ ದೋಷ
ಬೆಂಗಳೂರು; ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಇವತ್ತಿನಿಂದ ಶುರುವಾಗಿದೆ. ಆದ್ರೆ ಮೊದಲ ದಿನವೇ ಟೋಲ್ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಕೆಲವೊಂದು ಕಡೆ ಫಾಸ್ಟ್ ಟ್ಯಾಗ್ ವರ್ಕ್ ಆಗುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಪರದಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಇಂದು ಬೆಳಗ್ಗೆ ಕಣಮಿಣಕಿ ಟೋಲ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು, ಫಾಸ್ಟ್ ಟ್ಯಾಗ್ ಅಳವಡಿಸಲಾಗಿದ್ರೂ ಸರಿಯಾಗಿ ಕಾರ್ಯನಿರ್ವಹಿಸ್ತಿಲ್ಲ. ಕ್ಯಾಶ್ ನೀಡಿ ಹೋಗಬೇಕಾದರೆ ದುಪ್ಪಟ್ಟು ಹಣ ನೀಡಬೇಕು.
ಟೋಲ್ ಶುಲ್ಕ ಎಷ್ಟು?
ಬೆಂಗಳೂರಿನಿಂದ ನಿಡಘಟ್ಟದವರೆಗೆ ಸುಮಾರು 56 ಕಿ.ಮೀ ರಸ್ತೆಗೆ ಟೋಲ್ ಸಂಗ್ರಹ
ಕಾರು, ಜೀಪ್, ವ್ಯಾನ್ಗಳಿಗೆ ಏಕಮುಖ ಸಂಚಾರಕ್ಕೆ 135 ರೂ.
ದ್ವಿಮುಖ ಸಂಚಾರಕ್ಕೆ 205 ರೂ.
ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ.
ಲಘು ವಾಹನ, ಮಿನಿಬಸ್ಗಳಿಗೆ ಏಕಮುಖ ಸಂಚಾರಕ್ಕೆ 220 ರೂ.
ದ್ವಿಮುಖ ಸಂಚಾರಕ್ಕೆ 330 ರೂ.
ಸ್ಥಳೀಯ ವಾಹನಗಳಿಗೆ 110 ರೂ.
ತಿಂಗಳ ಪಾಸ್ 7,315 ರೂ.
ಬಸ್ ಹಾಗೂ ಟ್ರಕ್ಗಳ ಏಕಮುಖ ಸಂಚಾರಕ್ಕೆ 460 ರೂ
ದ್ವಿಮುಖ ಸಂಚಾರಕ್ಕೆ 690 ರೂ.
ಸ್ಥಳೀಯ ವಾಹನಗಳಿಗೆ 230 ರೂ.
ಮಾಸಿಕ ಪಾಸ್ 15,325 ರೂ.
ಮೂರು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 500ರೂ.
ದ್ವಿಮುಖ ಸಂಚಾರಕ್ಕೆ 750 ರೂ.
ಸ್ಥಳೀಯ ವಾಹನಗಳಿಗೆ 250 ರೂ.
ತಿಂಗಳ ಪಾಸ್ಗೆ 16,715 ರೂ.
ಭಾರೀ ನಿರ್ಮಾಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ 720 ರೂ.
ದ್ವಿಮುಖ ಸಂಚಾರಕ್ಕೆ 1,080
ಸ್ಥಳೀಯ ವಾಹನಗಳಿಗೆ 360 ರೂ.
ತಿಂಗಳ ಪಾಸ್ಗೆ 24,030 ರೂ.
ಅತಿ ಗಾತ್ರದ ವಾಹನಗಳ ಏಕಮುಖ ಸಂಚಾರಕ್ಕೆ 880 ರೂ.
ದ್ವಿಮುಖ ಸಂಚಾರಕ್ಕೆ 1,315 ರೂ
ಸ್ಥಳೀಯ ವಾಹನಗಳಿಗೆ 440 ರೂ.
ತಿಂಗಳ ಪಾಸ್ಗೆ 29,255 ರೂ.
ಈ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಿರ್ದಿಷ್ಟ ವೇಗ, ಸುರಕ್ಷತೆ ಹಾಗೂ ಯಾವುದೇ ಅಡೆ-ತಡೆ ಇಲ್ಲದೇ ಪ್ರಯಾಣಿಸಲು ಈ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಸರ್ವಿಸ್ ರಸ್ತೆ ನಿರ್ಮಾಣ ಆಗುವವರೆಗೂ ಆಟೋ ಹಾಗೂ ಬೈಕ್ಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವಿದೆ.