ಲಿಂಕ್ ಕ್ಲಿಕ್ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ
ಮುಂಬೈ; ಇತ್ತೀಚೆಗೆ ಮೊಬೈಲ್‌ಗಳಿಗೆ ಏನೇನೋ ಲಿಂಕ್‌ಗಳು ಬರುತ್ತಿರುತ್ತವೆ. ನೀವು ಅವುಗಳನ್ನು ಕ್ಲಿಕ್ ಮಾಡಿದರೆ ಮೋಸ ಹೋಗೋದು ಗ್ಯಾರೆಂಟಿ. ನಿಮ್ಮ ಅಕೌಂಟಿಂದ ದುಡ್ಡು ಖಾಲಿಯಾಗಿಬಿಟ್ಟಿರುತ್ತೆ. ಈ ತರಾ ತುಂಬಾ ಜನ ಮೋಸ ಹೋಗ್ತಾರೆ. ಅದೇ ರೀತಿ ಖ್ಯಾತ ನಟಿ ನಗ್ಮಾ ಕೂಡಾ ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಬ್ಯಾಂಕ್ ಹೆಸರಿನಲ್ಲಿ ನಗ್ಮಾ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿದ್ದಾರೆ. ಕೆವೈಸಿ ಭರ್ತಿ ಮಾಡಿ ಎಂದು ಒಂದು ಲಿಂಕ್ ಕಳುಹಿಸಿದ್ದಾರೆ. ಅದನ್ನು ನಂಬಿಸಿದ ನಗ್ಮಾ ಐದೇ ನಿಮಿಷದಲ್ಲಿ ಒಂದು ಲಕ್ಷ ರೂಪಾಯಿ ಕಳ್ಕೊಂಡಿದ್ದಾರೆ. ಫೆಬ್ರವರಿ 28 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೆವೈಸಿ ಅಪ್‌ಡೇಟ್ ಮಾಡಿ ಎಂದು ಹೇಳಿರುವ ದುಷ್ಕರ್ಮಿಗಳು ಲಿಂಕ್ ಕಳುಹಿಸಿ, ಫೋನ್‌ನಲ್ಲಿ ಮಾತನಾಡುತ್ತಾ ಫಾರ್ಮ್ ಫಿಲ್ ಮಾಡುವಂತೆ ಹೇಳಿದ್ದಾರೆ. ಅವರು ಹೇಳಿದಂತೆ ನಗ್ಮಾ ಮಾಡಿದ್ದು, ನೋಡನೋಡುತ್ತಿದ್ದಂತೆ ಅವರ ಖಾತೆಯಿಂದ ಒಂದು ಲಕ್ಷ ರೂಪಾಯಿ ಕಟ್ ಆಗಿದೆ. ಈ ಬಗ್ಗೆ ನಗ್ಮಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.