ರಾಯಚೂರು ಚುನಾವಣಾ ಐಕಾನ್ ಆಗಿ ಬಾಹುಬಲಿ ಖ್ಯಾತಿಯ ರಾಜಮೌಳಿ ನೇಮಕ
ರಾಯಚೂರು; ಬಾಹುಬಲಿ ಖ್ಯಾತಿಯ ಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ರಾಜ್ಯ ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಯಾಕಂದ್ರೆ ಅವರು ರಾಯಚೂರು ಜಿಲ್ಲೆಗೆ ಚುನಾವಣಾ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಈ ವಿಷಯವನ್ನು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ನಡೆಯುವ ಮತದಾನ ಜಾಗೃತಿ ಕುರಿತ ಚುನಾವಣಾ ಸ್ವೀಪ್ ಕಾರ್ಯಕ್ರಮಗಳಲ್ಲಿ ಎಸ್.ಎಸ್.ರಾಜಮೌಳಿಯವರು ಪಾಲ್ಗೊಳ್ಳುತ್ತಾರೆ. ಅಷ್ಟೇ ಅಲ್ಲದೆ, ವೀಡಿಯೋ ಕ್ಲಿಪ್‍ಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ, ಮತದಾರರು ಮತದಾನ ಮಾಡುವಂತೆ ಉತ್ತೇಜನ ನೀಡಲಿದ್ದಾರೆ ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದ್ದಾರೆ.
ರಾಜಮೌಳಿಯವರು ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ಬಳಿಯ ಅಮರೇಶ್ವರ ಕ್ಯಾಂಪ್ ನಲ್ಲಿ ಹುಟ್ಟಿದವರು. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಜಾಗೃತಿ ಮೂಡಿಸಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.