BengaluruHealthLifestyle

ಹೊಟ್ಟೆಯಲ್ಲಿದ್ದಾಗಲೇ ಮಗುವಿಗೆ ಸಂಸ್ಕಾರ ಕಲಿಸಲು ಹೊರಟ ಸಂವರ್ಧಿನಿ ನ್ಯಾಸ್‌ ಸಂಸ್ಥೆ

ರಾಷ್ಟ್ರ ಸೇವಿಕಾ ಸಮಿತಿಗೆ ಸೇರಿದ ಸಂವರ್ಧಿನಿ ನ್ಯಾಸ್‌ ಎಂಬ ಸಂಸ್ಥೆ ಗರ್ಭಿಣಿಯರಿಗಾಗಿ ʻಗರ್ಭ ಸಂಸ್ಕಾರ್‌ʼ ಎಂಬ ಅಭಿಯಾನವನ್ನು ಶುರು ಮಾಡಿದೆ. ರಾಷ್ಟ್ರ ಸೇವಿಕಾ ಸಮಿತ ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ಗೆ ಸೇರಿ ಮಹಿಳಾ ಸಂಘಟನೆ. ಅಂದಹಾಗೆ, ಈ ಸಂಸ್ಥೆ ಗರ್ಭ ಸಂಸ್ಕಾರ್‌ ಅಭಿಯಾನ ಶುರು ಮಾಡಿದೆ. ಈ ಅಭಿಯಾನದ ಮೂಲಕ ಗರ್ಭಿಣಿಯರಿಗೆ ರಾಮಾಯಣ, ಮಹಾಭಾರತದ ಬೋದನೆ ಮಾಡಲಾಗುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥರು ಹೇಳೋ ಪ್ರಕಾರ, ಗರ್ಭದಲ್ಲಿರುವ ಮಗುವಿಗೆ ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಸಬಹುದಂತೆ.

   ಗೈನಕಾಲಜಿಸ್ಟ್‌ಗಳು, ಆಯುರ್ವೇದ ವೈದ್ಯರು, ಯೋಗಾ ಶಿಕ್ಷಕರು ಸಹಕಾರದೊಂದಿಗೆ ನ್ಯಾಸ್‌ ಈ ಕಾರ್ಯಕ್ರಮವನ್ನು ರೂಪಿಸಿದೆ. ಹುಟ್ಟುವ ಮಗುವಿಗೆ ಹೊಟ್ಟೆಯಲ್ಲೇ ಸಂಸ್ಕಾರ ಹಾಗೂ ಮೌಲ್ಯಗಳಲ್ಲು ಕಲಿಸುವುದಕ್ಕಾಗಿ ಭಗವದ್ಗೀತೆ, ರಾಮಾಯಣ, ಮಹಾಭಾರತದ ಪಾರಾಯಣವನ್ನು ಗರ್ಭಿಣಿಯರಿಗೆ ಮಾಡಿಸುತ್ತಾರೆ. ಜೊತೆಗೆ ಗರ್ಭಿಣಿಯರಿಗೆ ಯೋಗಾ ಕೂಡಾ ಮಾಡಿಸುತ್ತಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜವಾಹರ ಲಾಲ್‌ ಯೂನಿವರ್ಸಿಟಿಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಒಂದು ವರ್ಕ್‌ಶಾಪ್‌ ಮಾಡಲಾಯಿತು. ಅದರಲ್ಲಿ 12 ರಾಜ್ಯಗಳಿಂದ ಒಟ್ಟು 80 ಮಂದಿ ಗೈನಕಾಲಜಿಸ್ಟ್‌ಗಳು ಪಾಲ್ಗೊಂಡಿದ್ದರು. ಮಹಿಳೆಯರು ಗರ್ಭ ಧರಿಸಿದಂದಿನಿಂದ, ಹುಟ್ಟಿದ ಮಗುವಿಗೆ ಎರಡು ವರ್ಷವಾಗುವವರೆಗೂ ಈ ಕಾರ್ಯಕ್ರಮ ಇರುತ್ತದೆ.

     ಈ ಗರ್ಭ ಸಂಸ್ಕಾರ್‌ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಶ್ಲೋಕಗಳು, ರಾಮಾಯಣದಲ್ಲಿನ ಪದ್ಯಗಳ ಪಠಣ ಮಾಡಲಾಗುತ್ತದೆ. ಮಗು ಹೊಟ್ಟೆಯಲ್ಲಿದ್ದಾಗಲೇ ಐದು ನೂರು ಪದಗಳವರೆಗೆ ಕಲಿತುಕೊಳ್ಳಬಲ್ಲದು ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ಆ ಸಮಯದಲ್ಲಿ ಮಗುವಿಗೆ ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಸಲು ಸಂವರ್ಧಿನಿ ನ್ಯಾಸ್‌ ಮುಂದಾಗಿದೆ.

ಹೊಟ್ಟೆಯಲ್ಲಿರುವ ಮಗು ನಿಜಕ್ಕೂ ಕಲಿಯುತ್ತಾ..? 

    ಈ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ನಾವೇನೇ ಹೇಳಿದರೂ, ಹೊಟ್ಟೆಯಲ್ಲಿರುವ ಮಗುವಿಗೆ ಏನೂ ಅರ್ಥವಾಗುವುದಿಲ್ಲ ಎಂದು ಕೆಲವು ನಿಪುಣರು ಅಭಿಪ್ರಾಯಪಡುತ್ತಿದ್ದಾರೆ. ಆದ್ರೆ ಇದೇ ವೇಳೆ ಕೆಲವರು ಮಗುವಿಗೆ ಹೊಟ್ಟೆಯಲ್ಲಿದ್ದಾಗಲೇ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳುತ್ತಾರೆ.

ಈ ಬಗ್ಗೆ ಇರುವ ಭಿನ್ನಾಭಿಪ್ರಾಯಗಳೇನು..? ಯಾಕೆ..?

   ಮುಂಬೈಗೆ ಸೇರಿದ ಗೈನಕಾಲಜಿಸ್ಟ್‌ ಒಬ್ಬರ ಪ್ರಕಾರ ಹೊಟ್ಟೆಯಲ್ಲಿರುವ ಮಗು ಶಬ್ದಗಳನ್ನು ಗ್ರಹಿಸಬಲ್ಲದು. ಆದ್ರೆ ಯಾವುದೇ ಭಾಷೆಯನ್ನು ಅರ್ಥ ಮಾಡಿಕೊಳ್ಳೋದಕ್ಕೆ ಅದಕ್ಕೆ ಸಾಧ್ಯವಾಗುವುದಿಲ್ಲವಂತೆ. ಹೊಟ್ಟೆಯಲ್ಲಿರುವ ಮಗುವಿನ ಅವಯವಗಳು ದಿನಕಳೆದಂತೆ ಒಂದೊಂದೇ ಅಭಿವೃದ್ಧಿಯಾಗುತ್ತಾ ಬರುತ್ತವೆ. ಕಿವಿಗಳು ಅಭಿವೃದ್ಧಿ ಹೊಂದಿದಾಗ ಧ್ವನಿ ತರಂಗಗಳುಮಗುವಿಗೆ ಕೇಳಿಸುತ್ತವೆ. ಆದರೆ ಅವುಗಳ ಅರ್ಥ ಮಗುವಿಗೆ ಗೊತ್ತಾಗವುದಿಲ್ಲ. ತಾಯಿ ಸಂಸ್ಕೃತ ಶ್ಲೋಕಗಳನ್ನು ಓದಿದರೂ ಹೊಟ್ಟೆಯಲ್ಲಿನ ಮಗುವಿಗೆ ಏನೂ ಅರ್ಥವಾಗುವುದಿಲ್ಲ ಎಂದು ಮುಂಬೈನ ಗೈನಕಾಲಜಿಸ್ಟ್‌ ಹೇಳುತ್ತಾರೆ.

     ಹೊಟ್ಟೆಯಲ್ಲಿನ ಮಗು ಎಲ್ಲವನ್ನೂ ಕಲಿತುಕೊಳ್ಳುತ್ತದೆ ಎಂಬುದು ಸುಳ್ಳು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಕೆಲವರು ಹೇಳುತ್ತಾರೆ. ಹೀಗಾಗಿ ಇಂತಹ ವಿಷಯಗಳಿಗೆ ಖರ್ಚು ಮಾಡುವ ಬದಲು, ಹುಟ್ಟಿದ ನಂತರ ಊಟ, ತಿಂಡಿ ಇಲ್ಲದ ಮಕ್ಕಳ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಹುಟ್ಟಿದ ಮೇಲೆ ಮುಗುವನ್ನು ಉತ್ತಮ ಪೌರನನ್ನಾಗಿ ಮಾಡಲು ಏನು ಮಾಡಬೇಕು ಎಂಬುದನ್ನು ಯೋಚನೆ ಮಾಡಬೇಕು. ಅದು ಬಿಟ್ಟು ಹೊಟ್ಟೆಯಲ್ಲಿರುವ ಮಗುವಿಗೆ ಕಲಿಸುವ ವ್ಯರ್ಥ ಪ್ರಯತ್ನ ಬೇಡ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ.

   ಮತ್ತೊಂದೆಡೆ ಕೆಲವು ತಜ್ಞರು ಬೇರೆಯದನ್ನೇ ಹೇಳುತ್ತಾರೆ. ಹೊಟ್ಟೆಯಲ್ಲಿರುವ ಪಿಂಡ ಕನಸುಗಳನ್ನು ಕಾಣುತ್ತದೆ ಎಂದು ಸಂಶೋಧನೆಯಲ್ಲಿ ಬಯಲಾಗಿದೆ ಎಂಬುದು ಕೆಲವರ ವಾದ. ಅಮೆರಿಕ ವೆಬ್‌ಸೈಟ್‌ ಸೈಕಾಲಜಿ ಟುಡೇ ಪ್ರಕಟಿಸಿದ ಫೀಟಲ್‌ ಸೈಕಾಲಜಿಯನ್ನು ಅವರು ಉದಾಹರಣೆಯಾಗಿ ನೀಡುತ್ತಾರೆ.

  ಹೊಟ್ಟೆಯಲ್ಲಿರುವ ಪಿಂಡಕ್ಕೆ ಒಂಬತ್ತು ವಾರಗಳು ಆಗಿದ್ದಾಗ, ಬಿಕ್ಕಳಿಗೆ ಬರುತ್ತವೆ. ದೊಡ್ಡ ಶಬ್ದಗಳಿಗೆ ಅದು ಸ್ಪಂದಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. 13 ವಾರಗಳ ಪಿಂಡ ಶಬ್ದಗಳನ್ನು ಕೇಳಿಸಿಕೊಳ್ಳಬಲ್ಲದು. ತಾಯಿಯ ಸ್ವರಕ್ಕೂ, ಇತರರ ಸ್ವರಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸಿ ಅದು ವ್ಯವಹರಿಸಬಲ್ಲದು ಎಂಬುದು ಕೆಲ ತಜ್ಞರ ವಾದ. ಹೊಟ್ಟೆಯಲ್ಲಿರುವ ಮುಗುವಿಗೆ ಒಂದೇ ಕಥೆಯನ್ನು ಪದೇ ಪದೇ ಹೇಳಿದರೆ ಅದಕ್ಕೆ ಆ ಮಗು ರಿಯಾಕ್ಟ್‌ ಆಗುತ್ತದೆ. ಹೊಟ್ಟೆಯಲ್ಲಿನ ಮಗು ಕೇಳುವುದು, ನೋಡುವುದು, ಗುರುತಿಸುವುದು ಮಾಡುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹಲವು ವಾದಿಸುತ್ತಿದ್ದಾರೆ. ಈ ವಾದದ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಗರ್ಭ ಸಂಸ್ಕಾರ್‌ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.

Share Post