ಮಾಡಾಳ್ ಆಸ್ತಿ ನೋಡಿ ಬೆಚ್ಚಿಬಿದ್ದರಾ ಲೋಕಾಯುಕ್ತ ಅಧಿಕಾರಿಗಳು..?; 400 ಎಕರೆ ಭೂಮಿ ರಹಸ್ಯ ಏನು..?
ದಾವಣಗೆರೆ; ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಸ್ವಗ್ರಾಮದ ನಿವಾಸದ ಮೇಲೆ ನಿನ್ನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಆ ದಾಖಲೆ ಪ್ರಮಾಣವನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಬೇಸ್ತು ಬಿದ್ದಿದ್ದಾರಂತೆ.
ನಿನ್ನೆ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದಲ್ಲಿ ಶೋದ ನಡೆಸಿದಾಗ ಸುಮಾರು 400 ಎಕರೆಯಷ್ಟು ಭೂಮಿ ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. ದಾವಣಗೆರೆಯಲ್ಲಿ 64 ಎಕರೆ, ಹೊಳಲ್ಕೆರೆಯಲ್ಲಿ 52 ಎಕರೆ, ಹೊಸದುರ್ಗದಲ್ಲಿ 180 ಎಕರೆ, ವಿಜಯನಗರದಲ್ಲಿ 52 ಎಕರೆ, ಶಿವಮೊಗ್ಗದಲ್ಲು 60 ಎಕರೆ ಹಾಗೂ ಚಿತ್ರದುರ್ಗದಲ್ಲಿ 232 ಎಕರೆ ಜಮೀನು ಇರುವುದು ಪತ್ತೆಯಾಗಿದೆ. ಜಂಗಮ ತುಂಬಿಗೆರೆ ಗ್ರಾಮದಲ್ಲಿ 52 ಎಕರೆ, ಮಂಗೋಟಿ ಬಳಿ 60 ಎಕರೆ, ತೊಗಲೇರಿ ಗ್ರಾಮದ ಬಳಿ 64 ಎಕರೆ ಇರುವುದು ಪತ್ತೆಯಾಗಿದೆ. ಇದರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.