BengaluruCrime

ದಾಖಲೆಗಳನ್ನು ನುಂಗಿದ್ದ ಪ್ರಶಾಂತ್‌ ಮಾಡಾಳ್‌; ಕಕ್ಕಿಸಿ ಸೀಜ್‌ ಮಾಡಿದ ಲೋಕಾಯುಕ್ತ ಅಧಿಕಾರಿಗಳು!

ಬೆಂಗಳೂರು; ನಿನ್ನೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರ ಪುತ್ರ ಪ್ರಶಾಂತ್‌ ಮಾಡಾಳ್‌ ಅವರು ಲಂಚ ಸ್ವೀಕಾರ ಮಾಡುತ್ತಿದ್ದಾಗ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಪೊಲೀಸರು ಕಚೇರಿಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿದ ಪ್ರಶಾಂತ್‌ ಅವರು ಕೂಡಲೇ ಮಹತ್ವದ ದಾಖಲೆಗಳನ್ನು ನುಂಗಿಬಿಟ್ಟಿದ್ದರಂತೆ. ಅಷ್ಟೇ ಅಲ್ಲ, ಅವರ ಕಚೇರಿ ಸಿಬ್ಬಂದಿ ಕೂಡಾ ಕೆಲ ದಾಖಲೆಗಳನ್ನು ನುಂಗಿದ್ದರಂತೆ.

ಇದನ್ನು ತಿಳಿದ ಲೋಕಾಯುಕ್ತ ಪೊಲೀಸರು, ಅವರಿಂದ ದಾಖಲೆಗಳನ್ನು ಕಕ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹತ್ವದ ದಾಖಲೆಗಳು ಸಿಕ್ಕರೆ ಕಷ್ಟ ಆಗುತ್ತೆ ಎಂದು ಆತುರಾತುರವಾಗಿ ಪ್ರಶಾಂತ್‌ ಅವರು ದಾಖಲೆ ನುಂಗಿದ್ದರಂತೆ. ಹೀಗಾಗಿ ಅವುಗಳನ್ನು ಕಕ್ಕಿಸಿರುವ ಲೋಕಾಯುಕ್ತ ಅಧಿಕಾರಿಗಳು, ಅವುಗಳನ್ನು ಸೀಜ್‌ ಮಾಡಿದ್ದಾರೆ ಎನ್ನಲಾಗಿದೆ.

Share Post