CinemaInternational

ಮಾರ್ಚ್‌ 13ಕ್ಕೆ ಆಸ್ಕರ್‌ ಪಶಸ್ತಿ ಸಮಾರಂಭ; ದೀಪಿಕಾ ಪಡುಕೋಣೆ ನಿರೂಪಕಿ

ಬೆಂಗಳೂರು; ಲಾಸ್‌ ಏಂಜಲೀಸ್‌ನಲ್ಲಿ ಭಾರತೀಯ ಕಾಲಮಾನ ಮಾರ್ಚ್‌ 13ರಂದು (ಅಲ್ಲಿ ಮಾರ್ಚ್‌ 12) ಆಸ್ಕರ್‌ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ನಿರೂಪಕಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ದೀಪಿಕಾ ಪಡುಕೋಣೆಯವರೇ ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಣೆ ಮಾಡುತ್ತಿರುವುದು ಖುಷಿ ತಂದಿದ್ದು, ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರತಿ ವರ್ಷವೂ ಒಂದಿಲ್ಲೊಂದು ಮಹತ್ವದ ಜವಾಬ್ದಾರಿಯನ್ನು ದೀಪಿಕಾ ನಿರ್ವಹಿಸುತ್ತಾ ಬಂದಿದ್ದಾರೆ. ಈ ಬಾರಿ ಅವರು ನಿರೂಪಕಿಯಾಗಿದ್ದಾರೆ. ಈ ಸಮಾರಂಭದಲ್ಲಿ ನಟರಾದ ರಾಮ್‌ ಚರಣ್‌ ಹಾಗೂ ಜೂ.ಎನ್‌ಟಿಆರ್‌ ಅವರು ನಾಡು ನಾಡು ಹಾಡಿಗೆ ವೇದಿಕೆ ಮೇಲೆ ಡ್ಯಾನ್ಸ್‌ ಮಾಡಲಿದ್ದಾರೆ.

ಅಂದಹಾಗೆ, ಆಸ್ಕರ್‌ ಕಾರ್ಯಕ್ರಮದಲ್ಲಿ ಒಟ್ಟು ಹತ್ತು ಮಂದಿ ನಿರೂಪಕರಿರುತ್ತಾರೆ. ಅದರಲ್ಲಿ ದೀಪಿಕಾ ಪಡುಕೋಣೆ ಕೂಡಾ ಒಬ್ಬರು. ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೋನೆ, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಜೋ ಸಲ್ಡಾನಾ ಮುಂತಾದವರು ಕೂಡಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

Share Post