CrimeNational

ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ಕಾಳಗ; ಮೂವರು ಪೊಲೀಸರು ಹುತಾತ್ಮ

ಸುಕ್ಮಾ; ಛತ್ತೀಸ್‌ಗಡದಲ್ಲಿ ಮತ್ತೆ ಕನ್ಸಲರ ಅಟ್ಟಹಾಸ ಮುಂದುವರೆದಿದೆ. ಸುಕ್ಮಾ ಜಿಲ್ಲೆಯಲ್ಲಿ ಸಶಸ್ತ್ರಪಡೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ. ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮುರಾಮ್ ನಾಗ್, ಕಾನ್‌ಸ್ಟೆಬಲ್‌ ಕುಂಜ್ರಾ ಮೋಗ ಮತ್ತು ವಂಜಮ್‌ ಭೀಮ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಇಲ್ಲಿನ ಜಗರಗುಂಡ ಹಾಗೂ ಕುಂಡೆಡ್ ಗ್ರಾಮಗಳ ವ್ಯಾಪ್ತಿಯ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಸಶಸ್ತ್ರಪಡೆ ಪೊಲೀಸರು ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ್ದರು.

Share Post