ಕಮಲ ಚಿಹ್ನೆ ರೀತಿಯಲ್ಲಿ ವಿಮಾನ ನಿಲ್ದಾಣ ಕಟ್ಟಡ; ಉದ್ಘಾಟನೆಗೆ ಶಿವಮೊಗ್ಗ ಏರ್‌ಪೋರ್ಟ್ ರೆಡಿ
ಶಿವಮೊಗ್ಗ; ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ರೆಡಿಯಾಗಿದೆ. ಯಡಿಯೂರಪ್ಪ ಅವರ ಹುಟ್ಟಿದ ದಿನವೇ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ವೆಚ್ಚ 449 ಕೋಟಿ ರೂಪಾಯಿ ತಗುಲಿದೆ. ಪ್ರಯಾಣಿಕರ ಟರ್ಮಿನಲ್ ಕಟ್ಟಡದ ವಿಸ್ತೀರ್ಣ 4,430 ಚದರ ಮೀಟರ್ ಇದ್ದರೆ, ರನ್ ವೇ ಉದ್ದ 3.5 ಕಿಲೋ ಮೀಟರ್ ಇದೆ. ಇದು ರಾಜ್ಯ ಎರಡನೇ ಅತಿದೊಡ್ಡ ರನ್ ವೇ ಎಂದು ತಿಳಿದುಬಂದಿದೆ. ಬೆಂಗಳೂರು ಬಿಟ್ಟರೆ ಇಲ್ಲೇ ಅತಿದೊಡ್ಡ ರನ್ ವೇ ಇರೋದು.
ಇನ್ನು ಈ ವಿಮಾನ ನಿಲ್ದಾಣದ ಕಟ್ಟಡವನ್ನು ಕಮಲ ಚಿಹ್ನೆ ರೀತಿಯಲ್ಲಿ ಕಟ್ಟಲಾಗಿದೆ. ಆಕಾಶದಿಂದ ನೋಡಿದಾಗ ಇಡೀ ಕಟ್ಟಡ ಕಮಲದ ರೀತಿಯಲ್ಲಿ ಕಾಣುತ್ತದೆ.