ರೂಪಾಗೆ ಬಾಯಿಗೆ ಬ್ರೇಕ್ ಹಾಕಿದ ಕೋರ್ಟ್; ಮಹಿಳಾ ಅಧಿಕಾರಿಗಳ ಕಿತ್ತಾಟಕ್ಕೆ ಬ್ರೇಕ್
ಬೆಂಗಳೂರು; ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಜಗಳಕ್ಕೆ ಬ್ರೇಕ್‌ಹಾಕೋದಕ್ಕೆ ಕೋರ್ಟ್ ಬರಬೇಕಾಯ್ತು.. ಐದು ದಿನಗಳಿಂದ ನಡೆಯುತ್ತಿದ್ದ ರೋಹಿಣಿ ಹಾಗೂ ರೂಪಾ ವಾರ್‌ಗೆ ಕೊನೆಗೂ ಬ್ರೇಕ್ ಬಿದ್ದಿದೆ. ರೂಪಾ ಅವರು ರೋಹಿಣಿ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಅಂತ ಕೋರ್ಟ್ ಹೇಳಿದೆ.
ಐಪಿಎಸ್ ಅಧಿಕಾರಿ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಾ ಬಂದಿದ್ದರು. ಹೀಗಾಗಿ ಇದಕ್ಕೆ ತಡೆ ನೀಡುವಂತೆ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ರೋಹಿಣಿ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು ಎಂದು ರೂಪಾಗೆ ಹೇಳಿದೆ. ಜೊತೆಗೆ ಮಾಧ್ಯಮಗಳಲ್ಲೂ ರೋಹಿಣಿ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಸೂಚಿಸಲಾಗಿದೆ.