CinemaCrime

ಮೈಸೂರಿಗೆ ಬರಲಿದ್ದಾರಂತೆ ನಟಿ ರಾಖಿ ಸಾವಂತ್‌

ಮೈಸೂರು; ಬಾಲಿವುಡ್ ನಟಿ ರಾಖಿ ಸಾವಂತ್ ಮೈಸೂರು ಹುಡುಗ ಆದಿಲ್‌ನನ್ನು ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರೂ ಈಗ ಬೇರೆ ಬೇರೆ ಆಗಿದ್ದಾರೆ ಕೂಡಾ. ಇದೀಗ ನಟಿ ರಾಖಿ ಸಾವಂತ್‌ ಅತೀ ಶೀಘ್ರದಲ್ಲೇ ಮೈಸೂರಿಗೆ ಬರಲಿದ್ದಾರಂತೆ.

ಪತಿ ಆದಿಲ್ ಗೆ ಬುದ್ಧಿ ಕಲಿಸೋದಕ್ಕಾಗಿ ಆಕೆ ಮೈಸೂರಿಗೆ ಬರುತ್ತಿದ್ದಾಳಂತೆ. ಜೊತೆಗೆ ಸ್ನೇಹಿತೆ ಶೆರ್ಲಿನ್ ಚೋಪ್ರಾಳನ್ನು ಕರೆತರುತ್ತಿದ್ದಾಳಂತೆ. ಮೈಸೂರಿನಲ್ಲಿ ಪತಿ ಆದಿಲ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಇರಾನಿ ಹುಡುಗಿಗೆ ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕಾಗಿ ಈ ದೂರು ದಾಖಲಾಗಿದೆ. ಆ ಹುಡುಗಿಗೆ ಬೆಂಬಲವಾಗಿ ಇಬ್ಬರು ನಟಿಯರು ಮೈಸೂರಿಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ.

Share Post