CrimeDistricts

ಚಿಂಚೋಳಿಯಲ್ಲಿ ಕಳುವಾಗಿದ್ದ ಸರ್ಕಾರಿ ಬಸ್‌ ತೆಲಂಗಾಣದಲ್ಲಿ ಪತ್ತೆ

ಕಲಬುರಗಿ; ಚಿಂಚೋಳಿ ಬಸ್ ನಿಲ್ದಾಣದಲ್ಲಿ ಕಳುವಾಗಿದ್ದ ಸರ್ಕಾರಿ ಬಸ್ ತೆಲಂಗಾಣದಲ್ಲಿ ಪತ್ತೆಯಾಗಿದೆ. ಪೊಲೀಸರಿಗೆ ಹೆದರಿ ಕಳ್ಳರು ತೆಲಂಗಾಣದಲ್ಲಿ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಂಗಳವಾರ ಮುಂಜಾನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಬಸ್ ನಿಲ್ದಾಣದಲ್ಲಿ ಬಸ್‌ ಕಾಣೆಯಾಗಿತ್ತು. ಬೀದರ್ ಡಿಪೋದ ಕೆಎ 38, ಎಫ್ 971 ಬಸ್ ಇದಾಗಿತ್ತು. ಇದರಿಂದ ಸಾರಿಗೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯ ನಿದ್ದೆಗೆಡಿಸಿತ್ತು.

Share Post