ವಿಪ್ರೋ ಹೊಸ ಉದ್ಯೋಗಿಗಳ ಸಂಬಳ ಶೇ.50ರಷ್ಟು ಕಡಿತ
ಬೆಂಗಳೂರು; ವಿಪ್ರೊ ಸಂಸ್ಥೆ ತನ್ನ ಹೊಸ ಉದ್ಯೋಗಿಗಳ ವೇತನವನ್ನು ಶೇಕಡಾ 50ರಷ್ಟು ಕಡಿತ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಇದು ಹೊಸ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕಂಪನಿಯಲ್ಲಿ ಆರ್ಥಿಕ ಹಿಂಜರಿತದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಪ್ರೋ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ನೌಕರರ ಒಕ್ಕೂಟ NITES ವಿರೋಧಿಸಿದೆ. ಇದು ಅನ್ಯಾಯ. ನಾವು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಇತ್ತೀಚೆಗಷ್ಟೇ ನೇಮಕ ಮಾಡಲು ಉದ್ದೇಶಿಸಿದ್ದ ಹೊಸ ನೌಕಕರಿಗೆ ವಾರ್ಷಿಕವಾಗಿ 6.5 ಲಕ್ಷ ವೇತನ ನೀಡುವುದೆಂದು ಹೇಳಿತ್ತು. ಆದರೆ ಇದೀಗ 3.5 ಲಕ್ಷ ವಾರ್ಷಿಕ ವೇತನಕ್ಕೆ ಒಪ್ಪಿಕೊಳ್ಳಿ ಎಂದ ಸಂದೇಶವನ್ನು ರವಾನಿಸಿದೆ.