BengaluruPolitics

ಹಿರಿಯ ನಟ ಅನಂತ್‌ ನಾಗ್‌ ರಾಜಕೀಯಕ್ಕೆ ರಿಎಂಟ್ರಿ; ಇಂದು ಬಿಜೆಪಿ ಸೇರ್ಪಡೆ

ಬೆಂಗಳೂರು; ನಾನು ಮೋದಿ ಅಭಿಮಾನಿ ಎಂದು ಹೇಳುತ್ತಿದ್ದ ಹಿರಿಯ ನಟ ಅನಂತ್‌ ನಾಗ್‌ ಮತ್ತೆ ರಾಜಕೀಯಕ್ಕೆ ರಿ ಎಂಟ್ರಿ ಆಗುತ್ತಿದ್ದಾರೆ. ಇಂದು ಸಂಜೆ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ಇಂದು ಸಂಜೆ ಅನಂತ್‌ ನಾಗ್‌ ಬಿಜೆಪಿ ಸೇರಲಿದ್ದಾರೆ.

ಈ ಹಿಂದೆ ಅನಂತ್‌ ನಾಗ್‌ ಅವರು ಜನತಾ ಪರಿವಾರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಜೆ.ಎಚ್‌.ಪಟೇಲ್‌ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ೨೦೦೪ರಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್‌ನಿಂದ ಸೋಲನುಭವಿಸಿದ್ದರು. ಅನಂತರ ಅನಂತ್‌ ನಾಗ್‌ ಅವರು ರಾಜಕೀಯದಿಂದ ದೂರವೇ ಉಳಿದಿದ್ದರು. ಆದ್ರೆ ಇತ್ತೀಚೆಗೆ ಅನಂತ್‌ ನಾಗ್‌ ಅವರು ಮೋದಿಯವರನ್ನು ಹಾಡಿ ಹೊಗಳುತ್ತಿದ್ದರು. ಇದೀಗ ಅವರು ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

 

Share Post