ಉಡುಪಿಯಲ್ಲಿ ಮಠಾಧೀಶರುಗಳ ಜೊತೆ ಜೆಪಿ ನಡ್ಡಾ ರಹಸ್ಯ ಸಭೆ
ಉಡುಪಿ; ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಿರುವಾಗಲೇ ಬಿಜೆಪಿ ರಾಷ್ಟ್ರನಾಯಕರುಗಳು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಬಿಜೆಪಿ ಪರ ಚುನಾವಣಾ ತಂತ್ರಗಳನ್ನ ರೂಪಿಸುತ್ತಿದ್ದಾರೆ.
ಇಂದು ಉಡುಪಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕರಾವಳಿ ಭಾಗದಲ್ಲಿ ಚುನಾವಣಾ ತಂತ್ರ ರೂಪಿಸಲು ಮುಂದಾಗಿದ್ದಾರೆ. ಉಡುಪಿ ಪೇಜಾವರ ಮಠಕ್ಕೆ ಭೇಟಿ ನೀಡಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ನಡ್ಡಾ ಪುಷ್ಟ ನಮನ ಸಲ್ಲಿಸಿದ್ರು, ಬಳಿಕ ರಾಮ ವಿಠಲ ಸಭಾಭವನದಲ್ಲಿ ವಿವಿಧ ಮಠಾಧೀಶರುಗಳೊಂದಿಗೆ ರಸಹ್ಯ ಸಭೆ ನಡೆಸಿದ್ದಾರೆ. ಭಾಗಿಲು ಹಾಕಿಕೊಂಡು ಸಭೆ ನಡೆಸುತ್ತಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ, ಸಭೆಯಲ್ಲಿ ಹಿಂದುತ್ವ, ಅಭಿವೃದ್ದಿ ಕಾರ್ಯ, ಕುರಿತಂತೆ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿರುವ ಸಾದ್ಯತೆ ಇದ್ದು ಚುನಾವಣಾ ತಂತ್ರಗಳ ಕುರಿತಾಗಿ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಟಿ ರವಿ, ಸುನಿಲ್ ಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಸಭೆ ಬಳಿಕ ಉಡುಪಿಯ ಎಂಜಿ ಎಂ ಮೈಧಾನದಲ್ಲಿ ನಡೆಯುತ್ತಿರುವ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಜೆಪಿ ನಡ್ಡಾ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಕಾರ್ಯರ್ತರನ್ನುದ್ದೇಶಿಸಿ ಜೆಪಿ ನಡ್ಡಾ ಭಾಷಣ ಮಾಡಲಿದ್ದು 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.