ಪತ್ನಿ ವಿರುದ್ಧ ಮಾತಾಡೋದಕ್ಕೆ ರೂಪಾ ಯಾರು..?; ರೋಹಿಣಿ ಪತಿ ಪ್ರಶ್ನೆ
ಬೆಂಗಳೂರು; ನಮ್ಮ ಪತ್ನಿ ಬಗ್ಗೆ ಮಾತನಾಡೋದಕ್ಕೆ ಡಿ.ರೂಪಾ ಯಾರು ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ವಿರುದ್ಧ ಕಿಡಿಕಾರಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಹೀಗಾಗಿ ಅಲ್ಲಿ ಪ್ರಚಾರ ಪಡೆಯೋದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸುಧೀರ್ ರೆಡ್ಡಿ ಆರೋಪ ಮಾಡಿದ್ದಾರೆ.
ರೋಹಿಣಿ ಸಿಂಧೂರಿಯ ಫೋಟೋಗಳೆಲ್ಲವೂ ನಿಜ, ಅವು ಸಹಜ ಫೋಟೋಗಳೇ ಆಗಿವೆ. ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಅವುಗಳನ್ನು ತೆಗೆದುಕೊಂಡಿರುವ ಬಗ್ಗೆ ಅನುಮಾನವಿದೆ ಎಂದೂ ರೋಹಿಣಿ ಪತಿ ಆರೋಪ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಿಸುತ್ತೇನೆ. ಕಾನೂನು ರೀತಿಯಲ್ಲಿ ಏನೆಲ್ಲಾ ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.