ಆಂಧ್ರಪ್ರದೇಶಕ್ಕೆ ಕೊನೆಗೂ ರಾಜಧಾನಿ ಫೈನಲ್; ವಿಶಾಖಪಟ್ಟಣಂ ಹೊಸ ರಾಜಧಾನಿ
ಹೈದರಾಬಾದ್; ಕೊನೆಗೂ ಆಂಧ್ರಪ್ರದೇಶಕ್ಕೆ ರಾಜಧಾನಿ ಯಾವುದು ಅನ್ನೋದು ಕನ್ಫರ್ಮ್ ಆಗಿದೆ. ಅಮರಾವತಿಯನ್ನು ರಾಜಧಾನಿ ಮಾಡಲು ಮೊದಲು ತೀರ್ಮಾನಿಸಲಾಗಿತ್ತು. ಅನಂತರ ಜಗನ್ ಮೋಹನ್ ರೆಡ್ಡಿ ಆಡಳಿತ ಬಂದ ಮೇಲೆ ಮೂರು ರಾಜಧಾನಿಗಳನ್ನು ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಆದ್ರೆ ಕೊನೆಗೂ ಜಗನ್ ಮೋಹನ್ ರೆಡ್ಡಿ ಹೊಸ ರಾಜಧಾನಿಯನ್ನು ಘೋಷಣೆ ಮಾಡಿದ್ದಾರೆ. ಅಮರಾವತಿ ಬದಲು ವಿಶಾಖಪಟ್ಟಣಂ ಅನ್ನು ರಾಜಧಾನಿಯಾಗಲಿದೆ ಎಂದು ಜಗನ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಜಗನ್‌ಮೋಹನ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಮುಂಬರುವ ತಿಂಗಳುಗಳಲ್ಲಿ ನಾನೇ ವಿಶಾಖಪಟ್ಟಣಂಗೆ ಶಿಫ್ಟ್ ಆಗಲಿದ್ದೇನೆ. ನಾವು ಮಾರ್ಚ್ 3 ಮತ್ತು 4 ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ ಜಗನ್ ಹೇಳಿದ್ದಾರೆ.