Bengaluru

ಏರೋ ಇಂಡಿಯಾ ಪ್ರದರ್ಶನ ಹಿನ್ನೆಲೆ; 20 ದಿನ ಮಾಂಸ ಮಾರಾಟ ನಿಷೇಧ

ಬೆಂಗಳೂರು; ಫೆಬ್ರವರಿ 13 ರಿಂದ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಏರೋ ಇಂಡಿಯಾ 2023” ಪ್ರದರ್ಶನದ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಿನಾಂಕ: 30.01.2023 ರಿಂದ 20.02.2023 ರವರೆಗೆ ಯಲಹಂಕ ವಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳಲ್ಲಿ ಎಲ್ಲಾ ತರಹದ ಮಾಂಸ ಮಾರಾಟ ನಿಷೇಧಿಸಲಾಗಿದೆ. ಈ ಭಾಗದ ಹೋಟೇಲ್ ಹಾಗೂ ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಪ್ಟ್ ರೂಲ್ಸ್ 1937 ರ ರೂಲ್ 91 ರೀತ್ಯಾ ಕ್ರಮವಹಿಸಲಾಗುವುದೆಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪೂರ್ಣಿಮ ರವರು ತಿಳಿಸಿರುತ್ತಾರೆ.

Share Post