DistrictsPolitics

ಸಿದ್ದರಾಮಯ್ಯಗಾಗಿ ಬೃಹತ್‌ ಮೈಸೂರು ಪಾಕ್‌ ಹಾರ

ಮೈಸೂರು; ಮೈಸೂರಿನಲ್ಲಿ ಕಾಂಗ್ರೆಸ್‌ ಜನಧ್ವನಿ ಯಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಬೃಹತ್‌ ಮೈಸೂರ್‌ ಪಾಕ್‌ ಹಾರವನ್ನು ತಯಾರಿಸಲಾಗಿದೆ.

ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಿನ್ನಲೆ ಮೈಸೂರು ಪಾಕ್ ಹಾರ ರೆಡಿಯಾಗಿದೆ.‌ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಬೃಹತ್ ಮೈಸೂರು ಪಾಕ್ ಹಾರ ತಯಾರಾಗಿದೆ. ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಕಾಳಿಸಿದ್ದನ ಹುಂಡಿ ಜೈ ಸ್ವಾಮಿಯವರು ಈ ಮೈಸೂರು ಪಾಕ್ ಹಾರವನ್ನ ಮಾಡಿಸಿದ್ದಾರೆ.

ಬೃಹತ್ ಹಾರಕ್ಕಾಗಿ ಬರೊಬ್ಬರಿ 750 kg ಮೈಸೂರು ಪಾಕ್ ಬಳಕೆಮಾಡಲಾಗಿದೆ. ಅಲ್ಲದೆ 750 ಕೆಜಿ ಮೈಸೂರು ಪಾಕ್ ಜೊತೆ 250ಕೆಜಿ ಹೂ ಸೇರಿದಂತೆ 1000 ಕೆಜಿ ತೂಕದ ಬೃಹತ್ ಹಾರ ಸಿದ್ಧವಾಗಿದೆ. ಸುಮಾರು 2.5 ಲಕ್ಷ ರೂ ವೆಚ್ಚದಲ್ಲಿ ಈ ಮೈಸೂರು ಪಾಕ್ ಹಾರ ನಿರ್ಮಾಣವಾಗುತ್ತಿರೊದು ವಿಷೇಶ.

ಮೈಸೂರಿನ‌ ಧನರಾಜ್ ಎನ್ನುವವರು ಮೈಸೂರು ಪಾಕ್ ಹಾರವನ್ನ ತಯಾರು ಮಾಡುತ್ತಿದ್ದಾರೆ. 20 ಜನರ ತಂಡದಿಂದ ಸುಮಾರು 15 ಗಂಟೆಗಳ ಪರಿಶ್ರಮದಿಂದ ಮೈಸೂರು ಪಾಕ್ ಹಾರ ತಯಾರಾಗಿದೆ. ಮೈಸೂರಿನ ಕಾಂಗ್ರೆಸ್ ಕಛೇರಿ ಮುಂಭಾಗ ಕ್ರೇನ್ ಮೂಲಕ ಸಿದ್ದರಾಮಯ್ಯಗೆ ಬೃಹತ್ ಮೈಸೂರು ಪಾಕ್ ಹಾರ ಸಮರ್ಪಣೆ ಮಾಡಲಿದ್ದಾರೆ.

Share Post