ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಕಾಡು ಪ್ರಾಣಿಗಳ ದಾಳಿ
ಮೈಸೂರು; ಹುಲಿ, ಚಿರತೆಗಳ ನಿರಂತರ ದಾಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.ಟಿ.ನರಸಿಪುರದಲ್ಲಿ ಚಿರತೆ ದಾಳಿಗೆ ನಾಲ್ಕನೆ ಬಲಿಯಾಗಿದೆ.ಇತ್ತ ಎಚ್.ಡಿ ಕೋಟೆಯಲ್ಲಿ ಹುಲಿ ದಾಳಿಗೆ ಯುವಕ ಬಲಿಯಾಗಿದ್ದಾನೆ.ನಾಗರಹೊಳೆ ಅರಣ್ಯ ಪ್ರದೇಶದ ಡಿ ಬಿ ಕುಪ್ಪೆ ವನ್ಯಜೀವಿ ವಲಯದಲ್ಲಿ ಈ ಘಟನೆ ನಡೆದಿದೆ.
ಡಿಬಿ ಕುಪ್ಪೆಯ ಬಳ್ಳೆಹಾಡಿಯ ಯುವಕ ಸೌದೆ ತರಲು ಕಾಡಿಗೆ ಹೋಗಿದ್ದಾಗ ಏಕಾಏಕಿ ಹುಲಿ ದಾಳಿ ಸಾವನ್ನಪ್ಪಿದ್ದಾನೆ. ಇತ್ತ ಟಿ.ನರಸಿಪುರ ತಾಲ್ಲೂಕಿನಲ್ಲಿ ನಿಲ್ಲದ ಚಿರತೆಗಳ ಉಪಟಳ ಹೆಚ್ಚಾಗಿದೆ.ಪ್ರಾಣ ಭೀತಿಯ ಸ್ಥಳೀಯರು ಸಂಜೆಯಾತ್ತಿದ್ದಂತೆ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.ಕಳೆದೆರು ದಿನಗಳ ಅಂತರದಲ್ಲಿ ಎರಡು ಅಮಾಯಕ ಜೀವಗಳ ಚಿರತೆ ದಾಳಿಗೆ ತುತ್ತಾಗಿದ್ದಾರೆ. ತಾಲೂಕಿನ ಕನ್ನನಾಯಕಹಳ್ಳಿಯ ಸಿದ್ದಮ್ಮ(60), ಹೊರಳಹಳ್ಳಿಯ ಜಯಂತ್(11) ಬಾಲಕ ಚಿರತೆ ದಾಳಿಗೆ ಬಲಿಯಾಗಿದ್ದಾರೆ.
ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಿಫಲವಾಗಿದ್ದು,ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಜನ ಆಕ್ರೋಶ ಗೋಂಡಿದ್ದಾರೆ.
ಇನ್ನೆಷ್ಟು ಬಲಿ ಪಡೆಯಬೇಕು ಅಂದುಕೊಂಡಿದ್ದೀರಾ ಎಂದು ಜನಪ್ರತಿನಿಧಿಗಳು, ಸಿಬ್ಬಂದಿಗಳ ಮೇಲೆ ಸ್ಥಳೀಯರ ಕಿಡಿ ಕಾರುತಿದ್ದಾರೆ.
ಈಗಾಗಲೇ ಸ್ಥಳಕ್ಕೆ ಸ್ಥಳೀಯ ಶಾಸಕ ಅಶ್ವಿನ್ ಕುಮಾರ್, ಡಿಸಿ ರಾಜೇಂದ್ರ, ಅರಣ್ಯ ಅಧಿಕಾರಿಗಳು ಭೇಟಿನೀಡಿದ್ದು ನರ ಭಕ್ಷಕ ಚಿರತೆಯನ್ನ ಸೆರೆಗಾಗಿ ಶೂಟ್ ಅಂಡ್ ಸೈಟ್ ಆದೇಶವನ್ನ ಅರಣ್ಯ ಅಧಿಕಾರಿಗಳು ನೀಡಿದ್ದಾರೆ.ಕಳೆದ ಮೂರು ತಿಂಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಾಲಾಕಿ ಚಿರತೆ ಚೆಳ್ಳೆಹಣ್ಣು ತಿನ್ನಿಸುತ್ತ ಸುತ್ತಾಡುತ್ತಿದೆ.