ಮೆಟ್ರೋ ಪಿಲ್ಲರ್ ಅವಘಡಕ್ಕೆ ಇಂಜಿನಿಯರ್ ಗಳ ನಿರ್ಲಕ್ಷ್ಯ ಕಾರಣ:ವರದಿ
ಬೆಂಗಳೂರು; ಜ.೧೦ ರಂದು ಕಲ್ಯಾಣ ನಗರದ ಎಚ್ ಬಿಆರ್ ಲೇಔಟ್ ನಲ್ಲಿ ನಡೆದಿದ್ದ ಮೆಟ್ರೋ ಪಿಲ್ಲರ್ ಅವಘಡದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ವಿನಿ ಆಕೆಯ ಎರಡೂವರೆ ವರ್ಷದ ಪುತ್ರ ವಿಹಾನ್ ಮೃತಪಟ್ಟಿದ್ರು. ಈ ಪ್ರಕರಣ ಸಂಭಂದಿಸಿದಂತೆ ಹೈದರಾಬಾದ್ ಐಐಟಿ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದೆ.
ಪಿಲ್ಲರ್ ಕುಸಿತಕ್ಕೆ ಕಾರಣವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಮರ್ಪಕ ಸಪೋರ್ಟ್ ಸಿಸ್ಟಮ್ ನೀಡದಿರುವುದೇ ಮೂಲ ಕಾರಣವಾಗಿದೆ. ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ವರದಿ ಯಲ್ಲಿ ಉಲ್ಲೇಖ ಮಾಡಿದ್ದಾರೆ. ಘಟನ ಸ್ಥಳಕ್ಕೆ ಐಐಟಿ ತಂಡ ಭೇಟಿ ನೀಡಿ ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ್ದಾರೆ ಪಿಲ್ಲರ್ ಬೇಸ್ ಮೆಂಟ್ ಗಟ್ಟಿ ಮಾಡಿಕೊಂಡು ಬಳಿಕ ಎತ್ತರಕ್ಕೆ ಕಂಬಿ ಕಟ್ಟಬೇಕು. ಆದರೆ ಇಲ್ಲಿ ಬೇಸ್ ಮೆಂಟ್ ಗಟ್ಟಿಯಿಲ್ಲದೆ , ಪಿಲ್ಲರ್ ಗೆ ಸಮರ್ಪಕ ಸಪೋರ್ಟ್ ಕುಡ ನೀಡದಿದ್ದ ಕಾರಣ ಭಾರ ಹೆಚ್ಚಾಗಿ ಪಿಲ್ಲರ್ ಕುಸಿದಿದೆ ಎಂದು ವರದಿ ನಿಡಿದ್ದಾರೆ.