ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವರಿಗೆ ಬೆದರಿಕೆ ಕರೆ; ಜಾಮರ್ ಇದ್ರೂ ಹೇಗೆ ಸಾಧ್ಯವಾಯ್ತು?
ಬೆಳಗಾವಿ; ಜೈಲಿನಲ್ಲಿದ್ದುಕೊಂಡೆ ಕೇಂದ್ರ ಸಚಿವರೊಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿರುವ ಆತಂಕಕಾರಿ ಬೆಳವಣಿಗೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಹಿಂಡಲಾಗ ಜೈಲಿನಿಂದ ಅಪರಾಧಿಯೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಕರೆ ಮಾಡಿ ಜೀವಬೆದರಿಕೆ ಹಾಕಿ ಬರೊಬ್ಬರಿ 100 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಹರಾಷ್ಟ್ರದ ನಾಗ್ಪುರ ಪೊಲೀಸರು ಜೈಲು ಅಧಿಕಾರಿಗಳ ಅನುಮತಿ ಪಡೆದು ಆರೋಪಿ ಜಯೇಶ್ ಪಾಟೀಲ್ ಎಂಬಾತನನ್ನ ಇಡಿ ದಿನ ಡ್ರಿಲ್ ಮಾಡಿ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೇ ಆತನಿಂದ ಡೈರಿ ಹಾಗೂ 4ಜಿ ಮೊಬೈಲ್ ಜಪ್ತಿ ಮಾಡಿದ್ದಾರೆ. ಡೈರಿಯಲ್ಲಿ ಹಲವು ಗಣ್ಯರು ರಾಜಕೀಯ ನಾಯಕರ ಪೋನ್ ನಂಬರ್ ಗಳು ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಜಯೇಶ್ ಪೂಜಾರಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಜೈಲಿನಲ್ಲಿ ಮೊಬೈಲ್ ನೆಟ್ವರ್ಕ್ ಜಾಮರ್ ಇದ್ರೂ ಕರೆ ಹೇಗೆ ಸಾದ್ಯವಾಯ್ತು.
ಕಾರಾಗೃಹ ಅನ್ನೊದು ಇಂದು ಮಾವನ ಮನೆಯಂತಾಗಿಬಿಟ್ಟಿದೆ, ಅಪರಾಧಿಗಳ ಮನ ಪರಿವರ್ತನೆ ಮಾಡುವ ಕೇಂದ್ರವಾಗದೇ ಪೊಷಿಸುವ ಕೇಂದ್ರವಾಗ್ತಿದೆ ಎಂಬ ಜನರ ಕುಹುಕಗಳಿಗೆ ಇಂತಹ ಘಟನೆ ಗಳು ಪುಷ್ಠಿಕರಿಸುತ್ತವೆ. ಜೈಲಿನಲ್ಲಿ ಖೈದಿಗಳಿಗೆ ವಿವಿಐಪಿ ಆಥಿತ್ಯಗಳು ಅಧಿಕಾರಿಗಳಿಂದಲೇ ಸಿಗುತ್ತಿರುವ ಅದೆಷ್ಟೋ ಪ್ರಕರಣಗಳನ್ನ ನಾವು ಕೇಳಿದ್ದೆವೆ. ಟಿವಿ, ನ್ಯೂಸ್ ಪೇಪರ್, ಮೊಬೈಲ್, ಬೆಡ್, ಇಷ್ಟ ಪಟ್ಟ ಆಹಾರ, ಗುಂಡು ತುಂಡು ಎಲ್ಲವೂ ಜೈಲಿನೊಳಗೆ ಸಪ್ಲೈ ಮಾಡಲಾಗ್ತಿದೆ ಎಂಬ ಆರೋಪಗಳು ಹೊಸತೇನಲ್ಲ. ಈ ಪ್ರಕರಣದಲ್ಲೂ ಮೊಬೈಲ್ ಪೋನ್ ಜೈಲು ಅಧಿಕಾರಿಗಳ ಕಣ್ತಪ್ಪಿಸಿ ಜಯೇಶ್ ನ ಬಳಿ ಹೇಗೆ ಬಂತು, ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದೆಯಾ ಎಂಬ ಅನುಮಾನ ಮೂಡಿದೆ. ಜೊತೆಗೆ ಜೈಲಿನಲ್ಲಿ ಆದ ಲೋಪಕ್ಕೆ ಸರ್ಕಾರದ ಪಾತ್ರವೂ ಇದೇ ಜೈಲಿನಲ್ಲಿ 2 ಜಿ ಮೊಬೈಲ್ ಜಾಮರ್ ಆಳವಡಿಸಲಾಗಿದೆ, ಇದು 4ಜಿ ಮೊಬೈಲ್ ಫೋನ್ ಗಳಿಗೆ ವರ್ಕೌಟ್ ಆಗೋದಿಲ್ಲ ಇದರಿಂದ ಅಪ್ ಗ್ರೇಡ್ ಮಾಡದೇ ಇರುವುದು ಕೂಡ ಇಂತಹ ಘಟನೆ ಗಳಿಗೆ ಕಾರಣವಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ. 4ಜಿ, 5ಜಿ ಜಾಮರ್ ಅಳವಡಿಸಿದ್ರೆ ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕಿದೆ.