International

ಭಾರತ, ಪಾಕ್‌ ಹಾಗೂ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ

ಇಸ್ಲಾಮಾಬಾದ್; ಭಾರತ ಹಾಗೂ ಅಫ್ಘಾನಿಸ್ತಾನದಲ್ಲಿ ಕಳೆದ ರಾತ್ರಿ 5.9 ತೀವ್ರತೆಯ ಭೂಕಂಪನವಾಗಿದೆ. ಹೀಗಿವಾಗಲೇ ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದೆ. ಅಲ್ಲೂ ಕೂಡಾ ರಿಕ್ಟರ್‌ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ.

ಹಿಂದೂ ಕುಶ್ ಪ್ರದೇಶದ 173 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದ ಕೇಂದ್ರ ಬಿಂದು ದಾಖಲಾಗಿದೆ. ನಿನ್ನೆ ರಾತ್ರಿ 7.26ರ ಸುಮಾರಿಗೆ ಪಾಕ್‌ನ ಗಿಲ್ಗಿಟ್, ಜೀಲಂ, ಚಕ್ವಾಲ್, ಪಾಕ್‍ಪಟ್ಟನ್, ಲಕ್ಕಿ ಮಾರ್ವಾಟ್ ಮುಂತಾದ ಕಡೆ ಭೂಮಿ ಕಂಪಿಸಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಏಕಾಏಕಿ ಭೂಮಿ ಕಂಪಿಸಿದ್ದರಿಂದ ಮೂರೂ ದೇಶಗಳ ಗಡಿ ಭಾಗದ ಜನ ಆತಂಕಕ್ಕೀಡಾಗಿದ್ದಾರೆ.

Share Post