ವಿಜಯಪುರ ಕಾಂಗ್ರೆಸ್ ಸಭೆಯಲ್ಲಿ ಜಡೆ ಜಗಳ: ಇಬ್ಬರ ಬಂಧನ
ವಿಜಯಪುರ; ಕಾಂಗ್ರೆಸ್ ಸಭೆಯಲ್ಲಿ ಮಹಿಳಾ ಪಧಾದಿಕಾರಿಗಳಿಬ್ಬರು ಪರಸ್ಪರ ಬಡಿದಾಡಿಕೊಂಡು ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ಇಬ್ಬರನ್ನ ಬಂಧಿಸಲಾಗಿದೆ.
ವಿಜಯಪುರ ಜಿಲ್ಲೆ ಹೊಸಪೇಟೆ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಜ.02 ರಂದು ಕಾಂಗ್ರೆಸ್ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಇಬ್ಬರು ಮಹಿಳಾ ಪದಾಧಿಕಾರಿಗಳು ಕಿತ್ತಾಡಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಕೇಳಲು ಖಾಸಗಿ ಹೋಟೆಲ್ ನಲ್ಲಿ ಪಕ್ಷದ ಪ್ರಮುಖರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕಲ್ಯಾಣ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿಲ್ಪಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ ಪರಸ್ಪರ ನಿಂದನೆ ಮಾಡಿಕೊಂಡು ಜಗಳಮಾಡಿಕೊಂಡಿದ್ದಾರೆ. ಬಳಿಕ ಸಭೆ ಮುಗಿಸಿ ಹೊರನಡೆಯುವ ಸಂದರ್ಭದಲ್ಲಿ ಕೈಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂದಿಸಿದಂತೆ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಯೋಗಲಕ್ಷ್ಮೀ ಹಾಗೂ ಪತಿ ಸಂದೀಪ್ ಇಬ್ಬರ ವಿರುದ್ದ ದೂರು ನೀಡಿದ್ದು ಯೋಗಲಕ್ಷ್ಮೀ ಹಾಗೂ ಅವರ ಸಂದೀಪ್ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊಸಪೇಟೆ ಪೊಲೀಸರು ಯೋಗಲಕ್ಷ್ಮೀ ಹಾಗೂ ಪತಿ ಸಂದೀಪ್ ರನ್ನ ಬಂದಿಸಿ ತನಿಖೆ ನಡೆಸುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಈ ರೀತಿ ಕಾಂಗ್ರೇಸ್ ಮುಖಂಡರುಗಳು ಪರಸ್ಪರ ನಿಂದನೆ, ಜಗಳ ಮಾಡಿಕೊಂಡಿರುವುದು ಕಾರ್ಯಕರ್ತರ ಮುಂದೆ ಅಪಹಾಸ್ಯಕ್ಕೀಡುಮಾಡಿದೆ.