ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಡಿ.12ಕ್ಕೆ ಪ್ರಮಾಣ
ಅಹಮದಾಬಾದ್; ಗುಜರಾತ್‌ನಲ್ಲಿ ಬಿಜೆಪಿ ಸತತ ಏಳನೇ ಬಾರಿ ಅಧಿಕಾರ ಹಿಡಿದಿದೆ. ಈ ಬಾರಿ ದಾಖಲೆಯ ಜಯ ಸಾಧಿಸಿದೆ. 157 ಸ್ಥಾನಗಳಲ್ಲಿ ಮುನ್ನಡೆ ಇರುವ ಬಿಜೆಪಿ, ಹಾಲಿ ಸಿಎಂ ಭೂಪೇಂದ್ರ ಪಟೇಲ್ ಅವರನ್ನೇ ಸಿಎಂ ಆಗಿ ಮುಂದುವರೆಸಲು ತೀರ್ಮಾನ ಮಾಡಿದೆ. ಡಿಸೆಂಬರ್ 12ರಂದು ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಆಗಮಿಸಲಿದ್ದಾರೆ. ಅಭಿವೃದ್ಧಿ ಪರವಾದ ಆಡಳಿತಕ್ಕೆ ಜನ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ಮತದಾರರ ತೀರ್ಪನ್ನು ನಾವು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.