NationalPolitics

ದೆಹಲಿ ಪಾಲಿಕೆ ಗದ್ದುಗೆ ಹಿಡಿದ ಆಮ್‌ ಆದ್ಮಿ ಪಾರ್ಟಿ; 132 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು

ನವದೆಹಲಿ; ಕಳೆದ ಮೂರು ಅವಧಿಯಿಂದ ದೆಹಲಿ ಕೇಂದ್ರಾಳಿತ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿರುವ ಆಮ್‌ ಆದ್ಮಿ ಪಾರ್ಟಿ ದೆಹಲಿ ಪಾಲಿಕೆಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. 250 ಕ್ಷೇತ್ರಗಳ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿತ್ತು. ಎಎಪಿ 132 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರಿಂದಾಗಿ ದೆಹಲಿಯಲ್ಲಿ ಕಳೆದ 15 ವರ್ಷಗಳಿಂದ ಪಾರಮ್ಯ ಮರೆದಿದ್ದ ಬಿಜೆಪಿ ಈಗ ಅಧಿಕಾರ ಕಳೆದುಕೊಂಡಂತಾಗಿದೆ.

ಎಎಪಿ 132, ಬಿಜೆಪಿ 105, ಕಾಂಗ್ರೆಸ್‌ 9, ಇತರರು 4 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆಪ್‌ಗೆ ತೆಕ್ಕೆಗೆ ಅಧಿಕಾರ ಬರುತ್ತಿದ್ದಂತೆ ಎಎಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

Share Post