CrimeDistricts

ಶಾರೀಖ್‌ ಇದ್ದ ಮೈಸೂರಿನ ಕೊಠಡಿಯಲ್ಲಿ ಹಲವು ಸ್ಫೋಟಕ ವಸ್ತುಗಳು ಪತ್ತೆ

ಮೈಸೂರು; ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಶಾರೀಖ್‌ ಮೈಸೂರಿನಲ್ಲಿ ವಾಸವಿದ್ದ. ಪೊಲೀಸರು ಆತ ವಾಸವಿದ್ದ ಕೊಠಡಿಯನ್ನು ಪರಿಶೀಲನೆ ಮಾಡಿದ್ದು, ಆ ಕೊಠಡಿಯಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ.

ಸಲ್ಫೆಕ್ಸ್‌ ಸಲ್ಫರ್‌ ಪೌಡರ್‌, ನಟ್‌ ಬೋಲ್ಟ್‌ಗಳು, ಸರ್ಕ್ಯೂಟ್‌ಗಳು, ಮಲ್ಟಿ ಫಂಕ್ಷನ್‌ ಡಿಲೆ ಟೂಮರ್‌, ಗ್ರೈಂಡರ್‌, ಮಿಕ್ಸರ್‌, ಮ್ಯಾಚ್‌ ಬಾಕ್ಸ್‌, ಬ್ಯಾಟರಿ, ಮೆಕ್ಯಾನಿಕಲ್‌ ಟೈಮರ್‌, ಆಧಾರ್‌ ಕಾರ್ಡ್‌, ಅಲ್ಯೂಮಿನಿಯಂ ಫೈಲ್‌, ಸಿಮ್‌ ಕಾರ್ಡ್‌ಗಳು, ಮೊಬೈಲ್‌ ಡಿಸ್‌ಪ್ಲೇಗಳು, ಸ್ಫೋಟಕಗಳಿಗೆ ಬಳಸುವ ವಿವಿಧ ಬಗೆಯ ಕೆಮಿಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿರುದ್ಧ ಯುಎಪಿಎ ಆಕ್ಟ್‌ ಅಡಿ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಇಂದು ಮುಂಜಾನೆ ಮಂಗಳೂರಿನ ಒಂದು ಕಡೆ, ಮೈಸೂರಿನ ಎರಡು ಕಡೆ ಸೇರಿ ರಾಜ್ಯದ ಏಳು ಕಡೆ ದಾಳಿ ಮಾಡಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಬಿಜೆಪಿ ನಾಯಕರಾಗಿರುವ ಶಾಸಕ ಎಸ್.ಎ.ರಾಮದಾಸ್‌ ಮತ್ತು ಸಂಸದ ಪ್ರತಾಪ್ ಸಿಂಹ ನಡುವಿನ ಮುಸುಕಿನ ಗುದ್ದಾಟ, ಟ್ವೀಟ್ ಕಲಹ, ವಿರಸ ಮುಗಿಯುವ ಲಕ್ಷಣಗಳಿಲ್ಲ. ಯಾಕೆ ಅಂತ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಬ್ರಾಹ್ಮಣರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಮಲ್ಲೇಶ್ ಅಕ್ಷೇಪಾರ್ಹ ಪದ ಬಳಕೆ ವಿರೋಧಿಸಿ ಬ್ರಾಹ್ಮಣರ ಒಕ್ಕೂಟ ಇಂದು ಮೈಸೂರು ನಗರದಲ್ಲಿ ಗನ್ ಹೌಸ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರಾಮದಾಸ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಾಪ್ ಸಿಂಹ ಅವರು ರಾಮದಾಸರ ಕಾಲುಮುಟ್ಟಿ ನಮಸ್ಕರಸಿದರೂ ಶಾಸಕರು ಮಾತ್ರ ಮುಖ ಗಂಟಿಕ್ಕಿಕೊಂಡೇ ಇದ್ದರು. ಈ ವಿಡಿಯೋ ವೈರಲ್ ಆಗಿದೆ.

Share Post