ವೋಟರ್ ಐಡಿ ಅಕ್ರಮ ಪ್ರಕರಣ; ಚಿಲುಮೆ ಮುಖ್ಯಸ್ಥ ರವಿಕುಮಾರ್ ಅರೆಸ್ಟ್
ಬೆಂಗಳೂರು; ಚುನಾವಣೆ ಹೊಸ್ತಿಲಲ್ಲಿ ವೋಟರ್ ಐಡಿ ಅಕ್ರಮ ಪ್ರಕರಣ ಬಯಲಿಗೆ ಬಂದಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಅವರ ಸಹೋದರ ಕೆಂಪೇಗೌಡ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಹಲವು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.
ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್ ಅವರು ಲಾಲ್ಬಾಗ್ ಬಳಿ ವಕೀಲರ ಭೇಟಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ದಾಖಲಿ ನಡೆಸಿ ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣದಲ್ಲಿ ಇದುವರೆಗೆ ಐದು ಮಂದಿಯನ್ನು ಬಂಧಿಸಿದಂತಾಗಿದೆ. ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಅವರ ಸಹೋದರ ಹಾಗೂ ಮೇಲ್ವಿಚಾರಕ ಕೆಂಪೇಗೌಡ, ಸಿಬ್ಬಂದಿ ಧರ್ಮೇಶ್, ರೇಣುಕಾ ಪ್ರಸಾದ್ ಹಾಗೂ ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ ಪ್ರಜ್ವಲ್ ಬಂಧನವಾಗಿದೆ