CrimeInternational

ನೈಟ್‌ ಕ್ಲಬ್‌ನಲ್ಲಿ ಸ್ಫೋಟ; ಐದು ಮಂದಿ ದುರ್ಮರಣ

ಕೊಲೊರಾಡೋ; ಇಲ್ಲಿನ ಸ್ಪ್ರಿಂಗ್ಸ್‌ನ ಎಲ್‌ಜಿಬಿಟಿಕ್ಯು ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಲಬ್ ಕ್ಯೂ ಹೆಸರಿನ ಈ ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯ ಕುರಿತು ಮೊದಲೇ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರಿಗೆ ಫೋನ್‌ ಕರೆ ಬಂದಿತ್ತು. ಪೊಲೀಸರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಇದು ದ್ವೇಷದ ದಾಳಿ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ವಕ್ತಾರ ಲೆಫ್ಟಿನೆಂಟ್ ಪಮೇಲಾ ಕ್ಯಾಸ್ಟ್ರೋ, ಶಂಕಿತ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.

 

Share Post